ಕಾರವಾರ: ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿಸಿ, ಬಳಿಕ ಬಸ್ ನಿಲ್ದಾಣದ ಮಾರ್ಗವಾಗಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಸ್ಕೂಟರ್‌ವೊಂದು ಬಸ್ಸಿನಡಿ ಸಿಕ್ಕಿಕೊಂಡು ಸವಾರರು ಅದೃಷ್ಟವಶಾತ್ ಪಾರಾದ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

RELATED ARTICLES  ಮೂಡಂಗಿ ರಂಗಮಂದಿರದಲ್ಲಿ "ಪ್ರಜಾರಾಜ್ಯೋತ್ಸವ ಕಾರ್ಯಕ್ರಮ"

ಭಟ್ಕಳದಿಂದ ಮಡಗಾಂವ್‌ಗೆ ಹೋಗುವ ಬಸ್ ನಿಲ್ದಾಣ ಪ್ರವೇಶಿಸುತ್ತಿತ್ತು. ಈ ಸಂದರ್ಭದಲ್ಲಿ ದಿಢೀರ್ ಬಸ್ ನ ಎದುರು ಬಂದ ಸ್ಕೂಟರ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಸವಾರರು ದೂರು ಜಿಗಿದಿದ್ದಾರೆ. ಸ್ಕೂಟರ್ ಬಸ್ಸಿನಡಿ ಸಿಕ್ಕಿಹಾಕಿಕೊಂಡಿತ್ತು.

ಸಂಭವಿಸಲಿದ್ದ ದೊಡ್ಡ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಘಟನೆಯಲ್ಲಿ ಸ್ಕೂಟಿ, ಬಸ್ ಟಾಯರ್ ನ ಸಮೀಪ ಸಿಲುಕಿಕೊಂಡಿದ್ದು, ಸಂಪೂರ್ಣ ಜಖಂಗೊoಡಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

RELATED ARTICLES  ಬಿಡುಗಡೆಯಾಗಿದೆ "ಮಾಯಾವಿ "ಕಿರು ಚಿತ್ರದ ಟ್ರೈಲರ್: ಕುತೂಹಲ‌ ಮೂಡಿಸಿದ ಕುಮಟಾದ ಪ್ರತಿಭೆಗಳ ಚಿತ್ರ.