ಬೆಂಗಳೂರು: ಅನೇಕಾನೇಕ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದ ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಾಗಿದ್ದ ಅಶೋಕ್ ರಾವ್ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಜೀವನ್ಮರಣದ ಜೊತೆ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ. ನಟ ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದರೆ ಮಧ್ಯೆರಾತ್ರಿ 12.30ಕ್ಕೆ ಕೊನೆಯುಸಿರೆಳೆದಿದ್ದಾರೆ. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ ಎನ್ನಲಾಗಿದೆ.

ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದರಾಗಿದ್ದರು. ಅಣ್ಣಾವ್ರೇ ಕರೆದು ಪರಶುರಾಮ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿಸಿದ್ದರು. ಪರಶುರಾಮ ಸಿನಿಮಾ ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಶೋಕ್ ರಾವ್ ಅವರು ಖಳನಾಯಕ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಸಿ ಆರ್ ಸಿಂಹ ಜೊತೆಗೂ ಅಶೋಕ್ ಅವರು ಕೆಲ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕುಮಾರ್ ಬಂಗಾರಪ್ಪ ‘ಅಶ್ವಮೇಧ’ ಚಿತ್ರದಲ್ಲಿಯೂ ಅಶೋಕ್ ನಟಿಸಿದ್ದಾರೆ.

RELATED ARTICLES  Covid Update : ಜನತೆಗೆ ನೆಮ್ಮದಿಯ ಸುದ್ದಿ

ಆವೇಶ’, ‘ಮತ್ತೆ ಹಾಡಿತು ಕೋಗಿಲೆ’, ‘ಕಾಲಚಕ್ರ’, ‘ಬಾ ನಲ್ಲೆ ಮಧುಚಂದ್ರಕೆ’, ‘ಹಬ್ಬ’ ಮುಂತಾದ ಚಿತ್ರಗಳಲ್ಲಿ ಅಶೋಕ್ ಬಣ್ಣ ಹಚ್ಚಿಸಿದ್ದಾರೆ. ಡಾ ರಾಜ್‌ಕುಮಾರ್, ಟೈಗರ್ ಪ್ರಭಾಕರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್ ಸೇರಿ ಅನೇಕ ನಟರ ಜೊತೆ ಅಶೋಕ್ ರಾವ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟೈಗರ್ ಪ್ರಭಾಕರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅಶೋಕ್ ರಾವ್ 15ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮಾಲ್ಗುಡಿ ಡೇಸ್’ ಸಿರೀಸ್‌ನಲ್ಲಿಯೂ ಅಶೋಕ್ ರಾವ್ ಅವರು ಅನಂತ್ ನಾಗ್ ಅಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಾಜಿ ಗಣೇಶನ್ ಪ್ರೊಡಕ್ಷನ್ಸ್‌ನಲ್ಲಿಯೂ ಅಶೋಕ್ ರಾವ್ ಕೆಲಸ ಮಾಡಿದ್ದಾರೆ. ಆದರೆ ಕಾಲ್‌ಶೀಟ್‌ನಿಂದ ‘ಆಕಸ್ಮಿಕ’ ಚಿತ್ರದಲ್ಲಿ ಅಶೋಕ್ ರಾವ್ ನಟಿಸೋದು ಮಿಸ್ ಆಯ್ತು. ರಜನಿಕಾಂತ್ ಅವರ ಜೊತೆ ‘ಚಂದ್ರಮುಖಿ’ ಚಿತ್ರದಲ್ಲಿಯೂ ಅಶೋಕ್ ರಾವ್ ಬಣ್ಣ ಹಚ್ಚಿದ್ದಾರೆ.

RELATED ARTICLES  ಭಾಷಣದಲ್ಲಿ ಮಹಾದಾಯಿ ಬಗ್ಗೆ ಮೌನ, ಪ್ರಧಾನಿ ವಿರುದ್ಧ ಅಸಮಾಧಾನ!