ಅಂಕೋಲಾ : ತಾಲೂಕಿನ ಅವರ್ಸಾದ ಯುವ ಉದ್ಯಮಿ ಮೋಹನದಾಸ ಮಾಧವ ಪೈ ಇವರು ಮುಂಬೈನಲ್ಲಿ ನಿಧನರಾಗಿರುವ ಬಗ್ಗೆ ಸ್ಥಳೀಯವಾಗಿ ವರದಿ ಲಭ್ಯವಾಗಿದೆ. ಇವರಿಗೆ 48 ವರ್ಷ ವಯಸ್ಸಾಗಿತ್ತು, ಇವರು ಅಂಕೋಲಾ ರೂರಲ್ ರೋಟರಿ ಕ್ಲಬ್‌ನ ಸ್ಥಾಪಕ ಸದಸ್ಯರಾಗಿ ಮತ್ತು ಕ್ಲಬ್‌ನ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡಿ ಜನಮನ್ನಣೆ ಗಳಿಸಿದ್ದರು.  ಸದಾ ಹಸನ್ಮುಖಿಯಾದ ಇವರು ದೀನದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಊರಿನ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

RELATED ARTICLES  ಕಾಂಗ್ರೆಸ್ ಪಕ್ಷದಿಂದ "ಮನೆ ಮನೆಗೆ ಕಾಂಗ್ರೆಸ್" ಯೋಜನೆ ಅಡಿಯಲ್ಲಿ ಜನತೆಗೆ ಪಕ್ಷದ ಸಾಧನೆ ತಿಳಿಸುವ ಕಾರ್ಯ

ರೋಟರಿ ಸಂಸ್ಥೆಯ ಮೂಲಕ ಸಮಾಜದ ಕಟ್ಟಕಡೆಯ ವರ್ಗದವರೆಗೆ ತಲುಪಿ ಜನಮಾನಸದಲ್ಲಿ ನೆಲೆನಿಂತ ಇವರ ಅಕಾಲಿಕ ನಿಧನದ ಸುದ್ದಿಯಿಂದ ರೋಟರಿ ಪರಿವಾರ ಹಾಗೂ ಅವರ್ಸಾ ಊರಿನ ಜನತೆಗೆ ಬರಸಿಡಿಲು ಬಡಿದಂತಾಗಿದೆ. ಉತ್ತಮ ಕ್ರೀಡಾಪಟು ಆಗಿದ್ದ ಇವರು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದರು. ಇವರು ಧರ್ಮಪತ್ನಿ ದೀಪಾ, ಮಗಳು ಇಶಾ ಮತ್ತು ತಾಯಿ ಮಾಲತಿ ಪೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED ARTICLES  ಶಿರಸಿ ಅಡಿಕೆಗೆ ಮಹತ್ವ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಟಿ.ಎಸ್.ಎಸ್