ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಬೈಕ್ ಚಲಾಯಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಹಾಲು ಡೈರಿಯ ಮುಖ್ಯಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಉಪ್ಪಡಿಕೆಯ ಆದಿತ್ಯ ಹೆಗಡೆ ಎಂಬಾತನೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈತ ಡೈರಿ ಕೆಲಸ ಮುಗಿಸಿ, ಜಿಮ್ ವರ್ಕೌಟ್ ಮಾಡಿ ಮನೆಗೆ ಬರುವ ವೇಳೆಗೆ ಈ ಅವಘಡ ಸಂಭವಿಸಿದೆ.

RELATED ARTICLES  ವಿದ್ಯುತ್ ಸಮಸ್ಯೆ ಪರಿಹರಿಸಿ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ : ದಿನಕರ ಶೆಟ್ಟಿ

ಮರಣದ ನಂತರ ನೇತ್ರದಾನದ ನೋಂದಣಿ ಮಾಡಿದ್ದ ಆದಿತ್ಯನ ಇಚ್ಛೆಯಂತೆ ಮನೆಯವರು ನೇತ್ರದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು. ಅಕಾಲ ಸಾವಿನಲ್ಲಿ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಆದಿತ್ಯ ಹೆಗಡೆಯ ಕುರಿತು ಪ್ರಶಂಸೆ ವ್ಯಕ್ತವಾಗಿದೆ. ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ಬದಲಿ ರಸ್ತೆಯ ನಾಮಫಲಕ ಹಾಕದೇ ಇರುವುದು ಈ ದುರಂತಕ್ಕೆ ಕಾರಣ ಎಂದು ಕೆಲ ಸಾರ್ವಜನಿಕರು ಆರೋಪಿಸಿದ್ದಾರೆ.

RELATED ARTICLES  ಶಿಕ್ಷಕ ಹಾಗೂ ಸಾಮಾಜಿಕ ಹೋರಾಟಗಾರ ಎಂ.ಆರ್.ಹೆಗಡೆ ಇನ್ನಿಲ್ಲ.