ಭಟ್ಕಳ: ಇಲ್ಲಿನ ಸರ್ಪನಕಟ್ಟೆಯ ಅಂಗಡಿಯೊಂದರಲ್ಲಿ ಮಟಕಾ ಓಸಿ ಆಡಿಸುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 1900 ರೂ ಹಣವನ್ನು ವಶಪಡಿಸಿಕೊಂಡ ಘಟನೆ ಸರ್ಪನಕಟ್ಟೆಯಲ್ಲಿ ಸೋಮವಾರ ಸಂಜೆ ನಡೆಸಿದೆ.

RELATED ARTICLES  ನಾಟಾ ಮೊದಲ ಪರೀಕ್ಷೆಯಲ್ಲಿ ವಿಧಾತ್ರಿ ಅಕಾಡಮಿ ವಿದ್ಯಾರ್ಥಿಗಳ ಸಾಧನೆ

ಬಂಧಿತ ಆರೋಪಿ ನಾಗರಾಜ ನಾಯ್ಕ ಸರ್ಪನಕಟ್ಟೆ ಎಂದು ಗುರುತಿಸಲಾಗಿದೆ. ಈತ ಸಾರ್ವಜನಿಕರ ಸ್ಥಳದಲ್ಲಿ ಓಸಿ ಆಡಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣಾ ಪಿ.ಎಸ್.ಐ. ಭರತಕುಮಾರ ದಾಳಿ ನಡೆಸಿ ಈತನಿಂದ 1900 ನಗದು ಹಣ ಮತ್ತು ಓಸಿ ಆಟಕ್ಕೆ ಸಂಬಂಧಿಸಿದ ಪರಿಕರಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ನಿಮ್ಮೊಳಗಿನ ಶಕ್ತಿ ನೀವು ನಂಬಿ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಐಐಟಿ ದೆಹಲಿ ಪ್ರಧ್ಯಾಪಕ ಕಿರಣ ಸೇಠ್ ರಿಂದ ಮಕ್ಕಳಿಗೆ ಕಿವಿಮಾತು.