ಭಟ್ಕಳ : ಇದೇ ಬರುವ ದಿನಾಂಕ‌ 06-02-2022 ರ ರವಿವಾರ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಪದ್ಮಾವತಿ ದೇವಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 1 ಗಂಟೆಯಿಂದ ಅನ್ನಸಂತರ್ಪಣೆ,ಸಂಜೆ 4 ಗಂಟೆಗೆ ಪುರಬೀದಿಯಲ್ಲಿ ಶ್ರೀ ದೇವಿಯ ಪಲ್ಲಕ್ಕಿಯ ಮೆರವಣಿಗೆ ನಡೆಯಲಿದೆ. ಪಲ್ಲಕ್ಕಿಯ ಮೆರವಣಿಗೆಯು ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮೂಲಕ ಸಾಗಿ ಪುಷ್ಪಾಂಜಲಿ ಚಿತ್ರಮಂದಿರದ ತನಕ ತಲುಪಿ ಅಲ್ಲಿಂದ ಹಿಂದಿರುಗಿ ವೀರವಿಠ್ಠಲ ರಸ್ತೆಯ ಮಾರ್ಗವಾಗಿ ನೆಹರು ರಸ್ತೆ, ಹೂವಿನ ಚೌಕ ಮೂಲಕ ಮಾರಿಗುಡಿ ಹತ್ತಿರ ಬಸದಿಯ ಎದುರಿನ ರಸ್ತೆಯ ಮಾರ್ಗವಾಗಿ ಆಸರಕೇರಿ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಅಲ್ಲಿಂದ ಸೊನಾರಕೇರಿ ಹಾಗೆಯೇ ಶಹರ ಪೋಲೀಸ್ ಠಾಣೆಯಲ್ಲಿ ಪೂಜೆ ಸ್ವೀಕರಿಸಿ ಹಳೆಬಸ್ ನಿಲ್ದಾಣ ಕಳಿಹನುಮಂತ ದೇವಸ್ಥಾನ ರಸ್ತೆಯ ಮೂಲಕ ದೇವಾಲಯಕ್ಕೆ ಹಿಂದಿರುಗಲಿದೆ. ಈ ಉತ್ಸವದಲ್ಲಿ ಎಲ್ಲ ಭಕ್ತರು ಪಾಲ್ಗೊಂಡು ಶ್ರೀ ದೇವಿಯ ಪ್ರಸಾದ ಸ್ವೀಕರಿಸಬೇಕಾಗಿ ಧರ್ಮದರ್ಶಿಗಳು ಕೋರಿದ್ದಾರೆ.

RELATED ARTICLES  ಯೋಗವೇ ನಮ್ಮನ್ನು ರಕ್ಷಿಸು! ಶೀರ್ಷಿಕೆಯಲ್ಲಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ