ಕಾರವಾರ : ಸರ್ಕಾರಿ ಉದ್ಯೋಗಿಯೋರ್ವರು ನಗರದ ಪ್ರೀಮಿಯರ್ ಹೊಟೇಲ್‌‌ನಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದ್ದು, ಈ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ.

ಮೂಲತಃ ಹೊನ್ನಾವರದವರಾದ ಕಾರವಾರ ಉಪವಿಭಾಗ ಕಚೇರಿಯ ಕಂದಾಯ ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಈಶ್ವರ ಭಟ್ ನೇಣಿಗೆ ಶರಣಾದ ದುರ್ದೈವಿಯಾಗಿದ್ದು
ಮೂಲದವರಾಗಿದ್ದಾರೆ. ಇವರಿಗೆ 38 ವರ್ಷ ವಯಸ್ಸಾಗಿತ್ತೆಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟೆದ್ದು ಪತ್ನಿ ಮತ್ತು ಪೊಲೀಸರಿಗೆ ಪ್ರತ್ಯೇಕ ಡೆತ್‌ನೋಟ್ ಅನ್ನು ಇರಿಸಿದ್ದಾನೆ.

RELATED ARTICLES  ನಿರ್ಲಜ್ಜ ವ್ಯಕ್ತಿಗಳು ವಕ್ಫ್‌ ಆಸ್ತಿಯನ್ನು ಅತಿಕ್ರಮಿಸಿಕೊಂಡು ಅದರ ಆದಾಯವನ್ನು ಅನುಭವಿಸುತ್ತಿದ್ದಾರೆ: ಹಮೀದ್‌ ಶೇಖ್‌

ನಾನು ನಿಮಗಾಗಿ ಆಸ್ತಿ ಮಾಡಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ನಿಗೆ ಪತ್ರದಲ್ಲಿ ಕ್ಷಮೆಯಾಚನೆ ಮಾಡಿದ್ದಾನೆ. ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES  ಗೋಕರ್ಣದ ಪ್ರಧಾನ ತಂತ್ರಿಗಳಾಗಿದ್ದ ಶ್ರೀ ಶಿತಿಕಂಠ ಹಿರೇ ಇನ್ನಿಲ್ಲ.