ಕುಮಟಾ : ತಾಲೂಕಿನ ಹಿರೇಗುತ್ತಿಯ ನಿವಾಸಿಯಾದ ಶ್ರೀ ಸುಧೀರ ಬೊಮ್ಮಯ್ಯ ಪಟಗಾರ, ಇವರು ಗಾರೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಹಿರೇಗುತ್ತಿ ಕ್ರಾಸ್ ಹತ್ತಿರ ಬೈಕ್ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಸ್ವಲ್ಪ ಆದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಹಿರೇಗುತ್ತಿಯ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರಿಗೆ ರೂಪಾಯಿ 7500=00( ಏಳು ಸಾವಿರದ ಐದು ನೂರು ಮಾತ್ರ)ವನ್ನು ನೀಡಿದರು, ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು, ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಹಿರೇಗುತ್ತಿಯ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು, ಈ ಮೂಲಕ ಪರಿಹಾರ ನಿಧಿಯನ್ನು ನೀಡಿದ ಯುವ ಬಳಗದವರಿಗೆ ಅಲ್ಲಿಯ ಸ್ಥಳೀಯ ಸದಸ್ಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

RELATED ARTICLES  ರಂಗ ಸಂಸ್ಕೃತಿ ಬಗ್ಗೆ ಕಾರ್ಯಾಗಾರ: ಕುಮಟಾದಲ್ಲಿ ನಡೆಯಿತು ವಿನೂತನ ಪ್ರಯೋಗ