ಕುಮಟಾ : ಪಟ್ಟಣದ ರಥ ಬೀದಿಯಲ್ಲಿ ನೆಲೆಸಿರುವ ಶ್ರೀ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮಿವೆಂಕಟರಮಣ ದೇವರ ಮಹಾ ರಥೋತ್ಸವ (ಕುಮಟಾ ಜಾತ್ರೆ) ಫೆ. ೮ರಂದು ಸರಳವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತಸರ್‌ ವಸುದೇವ ಪ್ರಭು ತಿಳಿಸಿದರು. ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇವರ ಅನುಗ್ರಹ, ನಮ್ಮಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷ್ಮಿವೆಂಕಟರಮಣ ದೇವರ ಮಹಾ ರಥೋತ್ಸವ ಫೆ. ೮ ರಂದು ನಡೆಯಲಿದೆ.

RELATED ARTICLES  ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ : ಶೃದ್ಧಾಂಜಲಿ ಸಲ್ಲಿಕೆ.

ಜಾತ್ರೆಯ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದೇವೆ. ಜಾತ್ರೆಯ ಧಾರ್ಮಿಕ ವಿಧಿವಿಧಾನಗಳು ಫೆ. ೫ ರಿಂದ ಆರಂಭಗೊಂಡು, ಫೆ.೧೦ರ ವರೆಗೆ ನಡೆಯಲಿದೆ. ಫೆ. ೮ಕ್ಕೆ ಮಹಾರಥೋತ್ಸವ ಮತ್ತು ಫೆ.೧೦ರಂದು ನಮ್ಮ ಗುರುಗಳ ಪುಷ್ಪರಥೋತ್ಸವ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಕುಮಟಾ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುವುದು. ಕೋವಿಡ್ ಸುರಕ್ಷತಾ ನಿಯಮಾವಳಿಗಳಾದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳ್ಳುವಂತೆ ಕುಮಟಾ ಜನತೆ ಸಹಕಾರ ನೀಡಬೇಕೆಂದು ವಿನಂತಿಸಿದರು.

RELATED ARTICLES  ವಾಹನಕ್ಕೆ ಸಿಲುಕಿ ಚಿರತೆ ಸಾವು..!