ಶಿರಸಿ: ವ್ಯಕ್ತಿಯೋರ್ವರಿಗೆ ಸರ್ಕಾರಿ ಖಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ವ್ಯಕ್ತಿಯನ್ನು, ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ದೂರೊಂದು ದಾಖಲಾಗಿದ್ದು, ಈ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಇಲ್ಲಿನ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿರಸಿಯ ಅಜಿತ ಶ್ರೀಕಾಂತ ನಾಡಿಗ, ಗೋಲಗೇರಿ ಓಣಿಯ ಧನುಶ್ಯಕುಮಾರ ದಿಲೀಪಕುಮಾರ ಶೆಟ್ಟಿ ಹಾಗೂ ಶಿವಮೊಗ್ಗದ ಪದ್ಮಜಾ ಡಿ. ಎನ್. ಬಂಧಿತರು ಎಂದು ತಿಳಿದುಬಂದಿದೆ. ದೂರುದಾರರ ತಂದೆಯವರನ್ನು ಭೇಟಿ ಮಾಡಿ ನಗ್ನ ಫೋಟೊ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಬೆದರಿಸಿದ್ದಾರೆ. ಇದನ್ನು ಡಿಲೀಟ್ ಮಾಡಬೇಕು ಎಂದಾದರೆ 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಅಲ್ಲದೆ, ಬಲವಂತವಾಗಿ ನಕಲಿ ದಾಖಲೆ ಸೃಷ್ಟಿಸಿ, ಕರಾರು ಪತ್ರ ಬರೆಸಿಕೊಂಡಿದ್ದು, ಬ್ಲಾಂಕ್ ಚೆಕ್ ಪಡೆದುಕೊಂಡಿದ್ದರು. ಹಣ ಕೊಡದೇ ಇದ್ದರೆ ಕೊಲೆ ಮಾಡಲಾಗುವುದು ಎಂದು ಹೆದರಿಸಿದ್ದರು ಎಂದು ಎಫ್‌ಐಆರ್‌ ನಲ್ಲಿ ದಾಖಲಿಸಲಾಗಿದೆ.

ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಎಸ್.ಪಿ. ಸುಮನ್ ಡಿ. ಪನ್ನೇಕರ್ ಅವರು ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಹುಡುಕಿ 24 ಗಂಟೆಯೊಳಗೆ ಬಂಧಿಸಿದ್ದಾರೆ.

RELATED ARTICLES  ದಾಂಡೇಲಿ- ಹೊನ್ನಾವರ ಬಸ್ ಅಪಘಾತ: ಹಲವರಿಗೆ ಗಾಯ

ಈ ಮೂವರ ವಿರುದ್ಧ ಐಪಿಸಿ 386, 388, 406, 384, 342, 423 506 ಸಹಿತ 34 ಪ್ರಕರಣಗಳು ದಾಖಲಾಗಿವೆ.

ಈ ಕಾರ್ಯಾಚರಣೆಯು ಎಸ್. ಭದರಿನಾಥ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಉ.ಕ, ಡಿವೈಎಸ್‌ಪಿ ರವಿ ಡಿ ನಾಯ್ಕ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಸಿಪಿಐ ರಾಮಚಂದ್ರ ನಾಯಕ, ಮಾಹಂತೇಶ ಬಾರಕೇರ ಸಿಎಚ್‌ಸಿ 1501, ಅಶೋಕ ನಾಯ್ಕ ಸಿಪಿಸಿ-1938, ರಾಮಯ್ಯ ಪೂಜಾರಿ ಸಿಪಿಸಿ-922, ವಿದ್ಯಾ ಎಚ್‌ವಿ ಮ‌ಎಚ್‌ಸಿ-1586, ಯಶೋದಾ ನಾಯ್ಕ ಮಪಿಸಿ-1621, ಪಾಂಡು ನಾಗೋಜ ಅವರುಗಳು ಪ್ರಕರಣ ಭೇದಿಸಿದ್ದು, ಎಸ್‌ಪಿ ಸುಮನ್ ಡಿ. ಪೆನ್ನೇಕರ್ ಪ್ರಕರಣ ಭೇದಿಸುವಲ್ಲಿ ಶ್ರಮವಹಿಸಿದ್ದರು.