ಕಾರವಾರ : ತಾಲೂಕಿನ ಕಣಸಗೇರಿ ಇಲಿಯಾಸ್ ಬಂದರು ಬಳಿ ದುಷ್ಕರ್ಮಿಗಳು ಸೈಯದ್ ಮಹಲ್ದಾರ್ ನೂರ್ ಎಂಬುವವರ ಸಮಾದಿ ಇರುವ ದರ್ಗಾವನ್ನು ದ್ವಂಸ ಗೊಳಿಸಿದ ಘಟನೆ ಇಂದು ನಡೆದಿದೆ. ಸ್ಥಳಕ್ಕೆ ಚಿತ್ತಾಕುಲ ಪೊಲೀಸರು ಹಾಜರಾಗಿ ಮಾಜುರು ಮಾಡಿದ್ದು ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ದಿ.೨೨ ರಂದು ಕುಮಟಾ ರೋಟರಿ ಲೈಫ್ ಸಪೋರ್ಟ್ ಯೋಜನಾನುಷ್ಠಾನದ ಹಸ್ತಾಂತರ ಸಮಾರಂಭ.

ಕಿಡಿಗೇಡಿಗಳು ದರ್ಗಾವನ್ನು ಸಂಪೂರ್ಣ ದ್ವಂಸ ಗೊಳಿಸಿ ಗೋಡೆ ಇತರ ಭಾಗಗಳನ್ನು ಹಾಳುಮಾಡಿದ್ದಾರೆ ಎನ್ನಲಾಗಿದೆ. ಈ ದರ್ಗಾವು ಸುಮಾರು 50 ವರ್ಷದ ಹಿಂದಿನದು ಎನ್ನಲಾಗಿದ್ದು , ಒಂದುಕಾಲು ಗುಂಟೆ ಪ್ರದೇಶದಲ್ಲಿದೆ.

ಘಟನೆಯು ನಿನ್ನೆ ರಾತ್ರಿವೇಳೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಇದರ ಪಕ್ಕದಲ್ಲೇ ಗಡಿನಾಥ ದೇವಸ್ಥಾನ ಸಹ ಇದ್ದು ದೇವಸ್ಥಾನ ಮತ್ತು ದರ್ಗಾವು ಆನಂದ್ ರಾಣೆ ಎನ್ನುವವರ ಹೆಸರಿನ ಜಾಗದಲ್ಲಿದೆ. ಈ ಹಿಂದೆಯೇ ಸೈಯದ್ ಮಹಲ್ದಾರ್ ನೂರ್ ರವರ ಸಮಾಧಿಗಾಗಿ ಅವರು ಜಾಗವನ್ನು ನೀಡಿದ್ದರು.

RELATED ARTICLES  ಕುಮಟಾದಲ್ಲೂ ಗೋ ಕಳ್ಳರ ಹಾವಳಿ: ಜನತೆಗೆ ಭೀತಿ ಹುಟ್ಟಿಸುತ್ತಿದೆ ಗೋ ಕಳ್ಳರ ಜಾಲ!