ಭಟ್ಕಳ : ಭಟ್ಕಳ ತಾಲೂಕಿನ ಕೈಕಿಣಿ ಗ್ರಾಪಂ ತೆರ್ನಮಕ್ಕೆ ಜನತಾ ಕಾಲೋನಿಯಲ್ಲಿ ಅನಾರೋಗ್ಯದ ಕಾರಣದಿಂದ ಬೇಸತ್ತಿದ್ದ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮೀ ಮಂಜುನಾಥ ಹಳ್ಳೇರ ಎಂದು ಗುರುತಿಸಲಾಗಿದೆ. ಸುಮಾರು 32 ವರ್ಷದ ವಯೋಮಾನದ ಮಹಿಳೆ ಎಂದು ವರದಿಯಾಗಿದೆ. ಅಪ್ಪನ ಲುಂಗಿಯನ್ನೇ ಈಕೆ ನೇಣನ್ನಾಗಿ ಮಾಡಿಕೊಂಡಿರುವುದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಡು ಬಂದಿದೆ.

RELATED ARTICLES  ಗ್ರಾಮ ಪಂಚಾಯತ ಹಿರೇಗುತ್ತಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಧ್ವಜಾರೋಹಣ

ಈಕೆಯನ್ನು 3-4 ವರ್ಷಗಳ ಹಿಂದೆಯೇ ಅಂಕೋಲಾ ಅಚವೆಗೆ ಮದುವೆ ಮಾಡಿಕೊಡಲಾಗಿದ್ದು, ಅನಾರೋಗ್ಯದ ಕಾರಣ ಕಳೆದ 4 ತಿಂಗಳ ಹಿಂದೆಯಷ್ಟೇ ತವರು ಮನೆಗೆ ವಾಪಸ್ಸಾಗಿದ್ದಳು. ಈಕೆಯ ತಾಯಿ ಕಳೆದ 6 ತಿಂಗಳ ಹಿಂದೆಯಷ್ಟೇ ಇಹಲೋಕ ತ್ಯಜಿಸಿದ್ದರು.

ಬೆಳಿಗ್ಗೆ ಈಕೆಯ ತಂದೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ, ಮನೆಯಲ್ಲಿದ್ದ ಇಬ್ಬರು ತಮ್ಮಂದಿರ ಪೈಕಿ ಓರ್ವ ದೇವರ ಪೂಜೆ ಹಾಗೂ ಇಂಜಿನೀಯರ್ ಆಗಿರುವ ಇನ್ನೋರ್ವ ತಮ್ಮಮನೆಯಲ್ಲಿಯೇ ಕಂಪೆನಿಯ ಕೆಲಸದಲ್ಲಿ ತಲ್ಲೀನನಾಗಿದ್ದ ಸಂದರ್ಭದಲ್ಲಿ ಮನೆಯ ಪಕ್ಕದ ಇನ್ನೊಂದು ನಿರ್ಮಾಣ ಹಂತದ ಮನೆಗೆ ತೆರಳಿ ಈಕೆ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.

RELATED ARTICLES  ಇಂದು ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಕೊರೋನಾ ಪ್ರಕರಣ : ಉ.ಕ ದಲ್ಲಿ 100 ಕ್ಕೇರಿದ ಕೊರೋನಾ ಸೋಂಕಿತರು

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.