ಹೊನ್ನಾವರ : ಕೆಲವು ದಿನದ ಹಿಂದೆ ತಾಲೂಕಿನ ಆಶಾ ಕಾರ್ಯಕರ್ತೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಅವಿವಾಹಿತೆಯೋರ್ವಳು ಜನ್ಮನೀಡಿದ ಶಿಶುವನ್ನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಸಹಾಯದಿಂದ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿ ತಾಲೂಕಿನಾದ್ಯಂತ ಹಬ್ಬಿತ್ತು. ಆಗ ತಾನೆ ಜನಿಸಿದ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  "ಗೋಕರ್ಣ ಗೌರವ" 387 ನೇ ದಿನದ ಕಾರ್ಯಕ್ರಮದಲ್ಲಿ ಮ ನಿ ಪ್ರ ದೇವಾನಂದಸ್ವಾಮಿಗಳು

ಸಂಬಂಧಪಟ್ಟ ಇಲಾಖೆಯವರನ್ನು ವಿಚಾರಿಸಿದಾಗ ತನಿಖೆ ನಡೆಯುತ್ತಿದೆ ಸರಿಯಾದ ಮಾಹಿತಿ ಸಿಗಲಿದೆ ಎಂದು ಹೇಳಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರಿನಂತೆ ಶಿರಸಿ ಮೂಲದ ಹಾಲಿ ಹಾಲಿ ಕರ್ಕಿಯ ದೊಡ್ಡಮ್ಮನ ಮನೆಯಲ್ಲಿ ವಾಸ್ತವ್ಯ ಇರುವ ಅವಿವಾಹಿತೆಯೋರ್ವಳು ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಳು. ಈ ವಿಷಯ ತಿಳಿದ ಅದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಇವರನ್ನು ಪರಿಚಯ ಮಾಡಿಕೊಂಡು ಮಗುವನ್ನು ಸಾಕಲು ಸಾಧ್ಯವಿದೆಯೆ ಎಂದು ವಿಚಾರಿಸಿ, ಅವರಿಗೆ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ನೀಡಲು ಪ್ರೇರೇಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES  ತುಂಬುತ್ತಿದೆ ಲಿಂಗನಮಕ್ಕಿ ಜಲಾಶಯ: ಪ್ರವಾಹದ ಎಚ್ಚರಿಕೆ, ಜನತೆಗೆ ಸುರಕ್ಷಿತ ಸ್ಥಳ ಸೇರಲು ಮನವಿ!