ಹೊನ್ನಾವರ: ತಾಲೂಕಿನ  ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆಯ ವಾರ್ಷಿಕ ವರ್ಧಂತಿ ಉತ್ಸವ ಫೆ. ೧೪ ರಂದು ಸೋಮವಾರ ದಂದು ಮಂಜುಗುಣಿಯ ಶ್ರೀ ವೆ.ಮೂ. ಪುಟ್ಟ ಭಟ್ಟ್ ಅಣ್ಣಯ್ಯ ಭಟ್ ಇವರ ಧಾರ್ಮಿಕ ಆಚಾರ್ಯತ್ವದಲ್ಲಿ ನಡೆಯಲಿದೆ. ಫೆ. ೧೩ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಫೆ. ೧೪ ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಕೋವಿಡ್ ನಿಯಮಾನುಸಾರವಾಗಿ  ನಡೆಯಲಿದೆ. ಎಂದು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಇಂದಿನ(ದಿ-21/02/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ