ಭಟ್ಕಳ: ಅಕ್ರಮವಾಗಿ ಗೋವುಗಳ ಸಾಗಾಟ ಹಾಗೂ ಗೋವುಗಳ ಮಾಂಸ ಸಾಗಾಟ ಜಾಲ ಉತ್ತರಕನ್ನಡದಲ್ಲಿ ಕಾರ್ಯ ಮಾಡುತ್ತಿದ್ದು, ಇದೀಗ ಮತ್ತೆ ವಧೆ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುವುದನ್ನು ಗಮನಿಸಿದ ಪೊಲೀಸರು ದಾಳಿ ಮಾಡಿ ಜಾನುವಾರುನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

RELATED ARTICLES  ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ.

ಆರೋಪಿತರು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಭಟ್ಕಳ ಶಾದ್ಲಿ ಸ್ಟ್ರೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ ಹಿಂಸಾತ್ಮಕವಾಗಿ ಇಕ್ಕಟ್ಟಾಗಿ ಕಟ್ಟಿದ್ದಾಗ ಪೊಲೀಸರು ದಾಳಿ ನಡೆಸಿ 8 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಜು.14 ಕ್ಕೆ ದ್ವಿತೀಯ PUC ರಿಸಲ್ಟ್; ಸಚಿವ ಸುರೇಶಕುಮಾರ್