ಹೊನ್ನಾವರ :  ತನ್ನ ಮನೆಯಿಂದ ವ್ಯಕ್ತಿಯೋರ್ವ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇನ್ನೊಬ್ಬ ವ್ಯಕ್ತಿ ಅಡ್ಡಗಟ್ಟಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಅರೇಅಂಗಡಿಯ ಸಿರಿ ಬಿ.ಎಸ್.
ಡಬ್ಲ್ಯೂ ಕಾಲೇಜು ಎದುರು ಸಂಭವಿಸಿದೆ. ನೀಲಕೋಡಿನ ಕಾಶಿನಾಥ ಗೋವಿಂದ ಭಾಗ್ವತ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರು ನೀಲಕೋಡ ಗ್ರಾಮದಲ್ಲಿರುವ ತನ್ನ ಮನೆಯಿಂದ ಅರೇಂಗಡಿಯ ಬಳಿ ಇರುವ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜ್ ಎದುರಿಗೆ ತಲುಪಿದಾಗ ಆರೋಪಿ ಅವರನ್ನು ಅಡ್ಡಗಟ್ಟಿ ತಡೆದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

RELATED ARTICLES  ಸ್ವರ್ಗಸಂವಾದ - ರಾಮಪದ - ರಜತ ಮಂಟಪದಿ ಶ್ರೀಕರಾರ್ಚಿತ ಪೂಜೆ : ಇದೀಗ ರಾಜ್ಯ ರಾಜಧಾನಿಯಲ್ಲಿ ಸ್ವರ್ಗದ ಕಂಪು‌.

ಗಣೇಶ ಹೆಗಡೆ ಅವರಿಗೆ ಜಾಗದ ವಿಷಯವಾಗಿ ತೊಂದರೆ ಕೊಡುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕಾಲಿನಿಂದ ಒದ್ದು, ಕೈಯಲ್ಲಿದ್ದ ಕಲ್ಲಿನಿಂದ ಎಡಕಣ್ಣಿನ ಹುಬ್ಬಿನ ಮೇಲೆ ಹೊಡೆದು ಗಾಯಪಡಿಸಿದ್ದಲ್ಲದೇ, ಮೈಮೇಲೆ ಅಲ್ಲಲ್ಲಿ ಕೈಯಿಂದ ಹೊಡೆದು ದೂಡಿ ನೆಲಕ್ಕೆ ಕೆಡಗಿ ನಿನಗೆ ಇಷ್ಟಕ್ಕೆ ಬಿಡುವುದಿಲ್ಲಾ. ಮುಂದೊಂದು ದಿನ ಸಿಕ್ಕಲ್ಲಿ ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಕಾಶಿನಾಥ ಗೋವಿಂದ ಭಾಗ್ವತ್ ಹೊನ್ನಾವರ ಠಾಣೆಯಲ್ಲಿ
ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಾಲೂಕಿನ ನವಿಲಗೋಣದ ಪರಮೇಶ್ವರ ಎಂಬುವವರ  ಮೇಲೆ ಪ್ರಕರಣ ದಾಖಲಾದ ಬಗ್ಗೆ ಸ್ಥಳೀಯ ಪತ್ರಿಕೆ ವರದಿಮಾಡಿದೆ.

RELATED ARTICLES  ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ