ಕುಮಟಾ: ಪಟ್ಟಣದ ಗುಜಿರಗಲ್ಲಿಯ ತುಳಸಿಕಟ್ಟೆಯ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಕಾಣಿಸಿಕೊoಡಿದ್ದು, ಮನೆಯೊಳಗೆ ದಟ್ಟ ಹೊಗೆ ಆವರಿಸಿ, ಬೆಂಕಿ ಬಿದ್ದಿರುವುದನ್ನು ಗಮನಿಸಿದ ಮನೆಯವರು ಕೂಡಲೇ ಮನೆಯಿಂದ ಹೊರಬಂದ ಘಟನೆ ವರದಿಯಾಗಿದೆ. ಗೋಪಾಲಕೃಷ್ಣ ಗಂಗೊಳ್ಳಿ ಮಾಲೀಕತ್ವದ ಮನೆಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ.

RELATED ARTICLES  ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಬಾವಿ ಸ್ವಚ್ಛಮಾಡಿದ ಕುಟುಂಬ: ಕುಮಟಾ ಹಳಕಾರ್ ಗ್ರಾಮದಲ್ಲಿ ನಡೆದ ಮಾದರಿ ಕೆಲಸ

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿದ ಘಟನೆ ಇದು ಎನ್ನಲಾಗಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂಬುದು ಸಮಾಧಾನಕರ ಸಂಗತಿ. ಬೆಂಕಿ ರಭಸಕ್ಕೆ ಮನೆಯೊಳಗಿದ್ದ ಪ್ರಿಜ್, ಟಿ.ವಿ, ಎಲೆಕ್ಟ್ರಿಕಲ್ ಮತ್ತು ಗೃಹಬಳಕೆ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

RELATED ARTICLES  ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಶಿರಸಿ ಅವರಿಗೆ ಸನ್ಮಾನ