ಮಹಾಲಿಂಗಪುರ : ಆಧುನಿಕ ಸೂಫಿಸಂತ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಇಂದು ಮುಂಜಾನೆ ನಿಧನ ಹೊಂದಿದರು. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಇಂದು ಬೆಳಗ್ಗೆ 6.30ರ ಸುಮಾರಿಗೆ ಅಸುನೀಗಿದರು.

ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ್ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಲಘು ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಇಬ್ರಾಹಿಂ ಸುತಾರ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ.

RELATED ARTICLES  ಮೈಮೇಲೆ ಮೇಲೆ ಹರಿದ ಲಾರಿ : ವ್ಯಕ್ತಿ ಸಾವು

ಮೇ 10, 1940ರಂದು ಜನಿಸಿದ ಇಬ್ರಾಹಿಂ ಎನ್​. ಸುತಾರ್​ ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್​, ತಾಯಿ ಅಮೀನಾಬಿ. ಮೂರನೇ ತರಗತಿವರೆಗೆ ಶಿಕ್ಷಣ ಪಡೆದಿದ್ದ ಸುತಾರ್ ಅವರು ನಂತರ ನೇಕಾರ ವೃತ್ತಿ ಮಾಡುತ್ತಿದ್ದರು. ಮಸೀದಿಯಲ್ಲಿ ನಮಾಜು, ಕುರಾನ್​ ಅಧ್ಯಯನ ಮಾಡಿದ ಅವರು, ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು.

RELATED ARTICLES  ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಳಿ ಸಿಕ್ತು ಕೋಟಿ ಹಣ

ಭಾವೈಕ್ಯತೆ ಹರಡುವ ಪ್ರವಚನ ಮಾಡುತ್ತಿದ್ದ ಇಬ್ರಾಹಿಂ ಸುತಾರ್ ಅವರ ಭಾಷಣಗಳನ್ನು ಕೇಳಲು ಭಾರೀ ಸಂಖ್ಯೆಯ ಜನ ಸೇರುತ್ತಿದ್ದರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಇಬ್ರಾಹಿಂ ಸುತಾರ್ ಅವರು ಮಾಡಿದ ಭಾಷಣದ ತುಣುಕು ಬಹಳ ವೈರಲ್ ಆಗಿತ್ತು.

1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಇಬ್ರಾಹಿಂ ಸುತಾರ್ ಅವರಿಗೆ, 2018ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

Source : Udayavani