ಶಿರಸಿ: ನಗರದ ಸಿ.ಎಮ್. ಸಿ ಕಾಂಪ್ಲೇಕ್ಸನಲ್ಲಿರುವ ಮಂಜು ಡಿಜಿಟಲ್ ಫೋಟೋ ಸ್ಟುಡಿಯೋ ಕಳ್ಳತನದ ಆರೋಪಿಯನ್ನು ಶುಕ್ರವಾರ ಶಿರಸಿ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಮಂಜು ಡಿಜಿಟಲ್ ಸ್ಟುಡಿಯೋದಲ್ಲಿದ್ದ 70,000 ರೂಪಾಯಿ ಬೆಲೆ ಬಾಳುವ ಕ್ಯಾಮರಾವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಶಿರಸಿ ನಗರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ,ಈ ಪ್ರಕರಣದ ಆರೋಪಿತನಾದ ಶಿವಮೊಗ್ಗದ ಗಿರೀಶ ಶಿವಪ್ಪ ಭಜಂತ್ರಿ ಈತನನ್ನು ದಸ್ತಗಿರಿ ಮಾಡಿ, ಈತನಿಂದ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.


ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕರಾದ ಸುಮನ್ ಪನ್ನೇಕರ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ ಭದ್ರಿನಾಥ,ಶಿರಸಿ ಡಿ.ಎಸ್.ಪಿ. ರವಿ ನಾಯ್ಡ ರವರ ಮಾರ್ಗದರ್ಶನದಲ್ಲಿ ಆರೋಪಿತನನ್ನು ಪತ್ತೆ ಹಚ್ಚಲಾಗಿದೆ.

RELATED ARTICLES  ಲಕ್ಷ್ಮಣ ಅಂಬಿಗರಿಗೆ ಬೀಳ್ಕೊಡುಗೆ : ಸಾಧನೆಯ ಬಗ್ಗೆ ಅವಲೋಕನ.

ಅತಿ ಶೀಘ್ರದಲ್ಲಿ ಪ್ರಕರಣ ಭೇದಿಸಿದ ಶಿರಸಿ ವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಸುಮನ್ ಡಿ. ಪೆನ್ನೇಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಅಂತರ್ ಜಿಲ್ಲಾ ಬೈಕ್ ಕಳ್ಳತನದ ಆರೋಪಿ ಅರೆಸ್ಟ್..!