ಅಂಕೋಲಾ: ದಿನಕರ ದೇಸಾಯಿಯವರ ಹೆಸರಿನಲ್ಲಿ ಕೊಡಲ್ಪಡುವ ರಾಷ್ಟ್ರ ಮಟ್ಟದ ಕಾವ್ಯ ಪುರಸ್ಕಾರಕ್ಕೆ ಕವಿಗಳಿಂದ ಕನ್ನಡ ಕವನ ಸಂಕಲನವನ್ನು ಆಹ್ವಾನಿಸಲಾಗಿದೆ. ಈ ವರ್ಷ ನೀಡುತ್ತಿರುವುದು 22ನೇ ಕಾವ್ಯ ಪುರಸ್ಕಾರವಾಗಿದೆ. ಪುರಸ್ಕಾರವು ರೂ. 25000/- ಮತ್ತು ಫಲಕ ಒಳಗೊಂಡಿರುತ್ತದೆ.


ಕಾವ್ಯ ಪುರಸ್ಕಾರಕ್ಕೆ ಕಳಿಸುವ ಪುಸ್ತಕವು ಮೊದಲನೆ ಮುದ್ರಣ ಕಂಡಿರಬೇಕು. ಮರುಮುದ್ರಣ ಕಂಡಿರಬಾರದು. ಪುರಸ್ಕಾರಕ್ಕೆ ಕಳಿಸುವ ಕೃತಿಯು 40 ಪುಟಗಳಿಗಿಂತ ಕಡಿಮೆ ಇರಬಾರದು.
ಕಾವ್ಯ ಪುರಸ್ಕಾರಕ್ಕೆ 2020 ಜನವರಿಯಿಂದ 2021 ಡಿಸೆಂಬರ್ ಕೊನೆಯ ಒಳಗೆ ಪ್ರಕಟವಾದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಕಾವ್ಯ ಪುರಸ್ಕಾರಕ್ಕೆ ಪ್ರಕಟಿತ ಕೃತಿಯ ಕನಿಷ್ಟ 3 ಪ್ರತಿಗಳನ್ನು ಕಳಿಸುವದು ಕಡ್ಡಾಯವಾಗಿದೆ.

RELATED ARTICLES  ಅಲೆಗೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ.

ಅನುವಾದಿತಕವನಸಂಕಲನಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರತಿಷ್ಠಾನದ ಆಡಳಿತ ಮಂಡಳಿಯ ಅಥವಾ ವಿಶೇಷ ಆಮಂತ್ರಿತರ ಕವನ ಸಂಕಲನಗಳಿಗೆ ಪ್ರವೇಶವಿಲ್ಲ. ಕಾವ್ಯ ಪುರಸ್ಕಾರಕ್ಕೆ ಕೃತಿಗಳನ್ನು ಕಳುಹಿಸಲು 30.04.2022 ಕೊನೆಯ ದಿನವಾಗಿದೆ. ಕೃತಿಗಳನ್ನು ಕಳಿಸಬೇಕಾದ ವಿಳಾಸ : ವಿಷ್ಣು ನಾಯ್ಕ, ಸಂಸ್ಥಾಪಕ ಕಾರ್ಯದರ್ಶಿ, ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ.) `ಪರಿಮಳ’, ಅಂಬಾರಕೊಡ್ಲ, ಅಂಕೋಲಾ-581314 ಉತ್ತರ ಕನ್ನಡ ಜಿಲ್ಲೆ (ಕರ್ನಾಟಕ) ವಿಳಾಸಕ್ಕೆ ಕಳುಹಿಸುವದು.

RELATED ARTICLES  "ಕೊಂಡು ಓದುವ ಪ್ರವೃತ್ತಿಯೇ ಸಾಹಿತ್ಯದ ಬೆಳವಣಿಗೆಗೆ ನಿಜವಾದ ಪ್ರೇರಣೆ ". - ಅರ್ತಿಕಜೆ.


ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಮೇಲಿನ ವಿಳಾಸಕ್ಕೆ ಬರೆದು ಇಲ್ಲವೇ ದೂರವಾಣಿ ಮೊ. 9448145370, 9686867601
ಮೂಲಕ ಸಂಪರ್ಕಿಸಬೇಕೆಂದು ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.