ಕಾರವಾರ : ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿದ್ದು ಕ್ರೂರ ಪ್ರಾಣಿಗಳನ್ನು ಕಂಡು ಜನರು ಭಯ ಬಿದ್ದುಕೊಂಡಿರುವ ಘಟನೆ ಮೇಲಿಂದ ಮೇಲೆ ವರದಿಯಾಗುತ್ತಿದೆ. ಇದೀಗ  ಇಳಕಲ್- ಕದ್ರಾ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ತಾಲ್ಲೂಕಿನ ಬಾರೆಯ ಸಮೀಪ ಕದ್ರಾ ರಸ್ತೆಯಲ್ಲಿ ಹುಲಿಯೊಂದು ರಾತ್ರಿಯ ಸಮಯದಲ್ಲಿ ಕಂಡು ಬಂದಿದೆ ಎನ್ನಲಾಗಿದ್ದು, ಇದರಿಂದ ಜನತೆ ಭಯಗೊಂಡ ಬಗ್ಗೆ ವರದಿಯಾಗಿದೆ.

ಆದರೆ ಜನ ಭಯಭೀತರಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಶುಕ್ರವಾರ ರಾತ್ರಿ ಬಾರೆ ಸಮೀಪದ ಕದ್ರಾಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಹುಲಿ ಮಲಗಿತ್ತು.ಬೈಕ್ ಸವಾರರೊಬ್ಬರು ಅದನ್ನು ನೋಡೊದ್ದಾರೆ. ಹೆದ್ದಾರಿಯಲ್ಲಿ ಸಂಚರಿಸಿದ ಹುಲಿಯು, ರಸ್ತೆಯ ಪಕ್ಕದಲ್ಲಿಳಿದು ಹೋಗಿದೆ. ಅದೇ ರೀತಿ, ಇಡಗುಂದಿ ವಲಯ ಅರಣ್ಯ ಕಚೇರಿಯ ಸಿಬ್ಬಂದಿ ಈ ಭಾಗಕ್ಕೆ ಗಸ್ತು ತಿರುಗಾಟಕ್ಕೆ ಹೋದಾಗಲೂ ಕಾಣಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಂಚಿಕೇರಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಈ ಪ್ರದೇಶವು ಕದ್ರಾ ವನ್ಯಜೀವಿ ವಲಯದಲ್ಲಿದ್ದು, ಹುಲಿ ವಾಸ ಸಾಮಾನ್ಯವಾಗಿದೆ. ದಟ್ಟ ಅರಣ್ಯದೊಳಗೆ ಇರುವ ಹುಲಿ ಅಪರೂಪಕ್ಕೆ ಹೆದ್ದಾರಿಗೆ ಬಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಇದರ ಚಲನವಲನ ಗಮನಿಸುತ್ತಿದ್ದಾರೆ. ಇದರಿಂದ ಯಾವುದೇ ಅಪಾಯವಾಗಿಲ್ಲ. ಜನ ಭಯಭೀತರಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದ ಶಾಸಕಿ ರೂಪಾಲಿ ನಾಯ್ಕ.