ಸಿದ್ದಾಪುರ: ತಾಲೂಕಿನ ಬಿಕ್ಕಳಸೆ ಹತ್ತಿರವಿರುವ ಶಿರಳಗಿ ಹೈಸ್ಕೂಲ್‌ನಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ತಾಲೂಕಿನ ಶಿರಳಗಿಯ ನವೀನ ವೀರಭದ್ರ ನಾಯ್ಕ ನಾಪತ್ತೆಯಾಗಿದ್ದು, ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 14 ವರ್ಷ ವಯೋಮಾನದ ಈತ ಈತನು ಸೈಕಲ್ ಹೊಡೆಯುವ ಮತ್ತು ಮೊಬೈಲ್ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದನು. ಕಳೆದ ಒಂದು ವಾರದಿಂದ ಕೊವಿಡ್ ಪಾಸಿಟಿವ್ ಬಂದಿರುವುದರಿಂದ ಮನೆಯಲ್ಲೇ ಇದ್ದ ಈತ ಫೆ. 3 ರಂದು ಮನೆಯಿಂದ ಕಾಣೆಯಾಗಿದ್ದಾನೆ ಎಂಬ ಬಗ್ಗೆ ಸ್ಥಳೀಯ ಪತ್ರಿಕೆ ವರದಿಮಾಡಿದೆ.

RELATED ARTICLES  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜಿನಾಮೆ.

ಮನೆಯಲ್ಲಿ ಮಗನು ಹಾಗೂ ಆತನ ಸೈಕಲ್ ಇಲ್ಲದೆ ಇರುವುದನ್ನು ಗಮನಿಸಿದ ಆತನ ತಂದೆ ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದಾಗ‌ ಯಾರೋ ಅಪಹರಣ ಮಾಡಿರಬಹುದು ಎಂಬ ಸಂಶಯ‌ ವ್ಯಕ್ತಪಡಿಸಿ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES  ದೇವಾಲಯ ಕಳ್ಳತನ ಮಾಡಿ ತಪ್ಪಿಸಿಕೊಳ್ಳುವಾಗ ಅಪಘಾತ

ಕಾಣೆಯಾದ ಬಾಲಕನು 4 ಅಡಿ, 4 ಇಂಚು ಎತ್ತರ, ಬೆಳ್ಳನೆಯ ಮೈ ಬಣ್ಣ, ಸಾಧಾರಣ ಮೈಕಟ್ಟು, ನೀಲಿಬಣ್ಣದ ಹಾಫ್ ತೋಳಿನ ಟಿ- ಶರ್ಟ್, ನೇರಳೆ ಬಣ್ಣದ ನೈಟ್ ಪ್ಯಾಂಟ್ ಧರಿಸಿ ಶಿಕ್ಷಣ ಇಲಾಖೆಯಿಂದ ನೀಡಿದ ನೀಲಿಬಣ್ಣದ ಸೈಕಲ್
ತೆಗೆದುಕೊಂಡು ಹೋಗಿದ್ದಾನೆ ಎಂದು ತಿಳಿಸಲಾಗಿದೆ.