ಅಂಕೋಲಾ: ತಾಲೂಕಿನ ಕಾವ್ಯಶ್ರೀ ಸುಕದ್ ಕೆರೆಮನೆಯವರಿಗೆ “ನ್ಯೂ ಆರ್ಗೆನಿಕ್ ಆ್ಯಂಡ್ ಇನೊಗ್ರ್ಯಾನಿಕ್ ಪಂಕ್ಷನಲ್ ಮೆಟೀರಿಯಲ್ಸ್ ಫಾರ್ ಫೋಟೋ ವೋಲ್ಟಾಯಿಕ್ ಅಪ್ಲಿಕೇಶನ್” ಎಂಬ ಕೃತಿಗಾಗಿ ಡಾಕ್ಟರ್ ಓಫ್ ಫಿಲಾಸಫಿ (ಪಿ.ಎಚ್.ಡಿ) ಪದವಿಯನ್ನು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸುರತ್ಕಲ್ (ಎನ್.ಐ.ಟಿ.ಕೆ) ನೀಡಿ ಗೌರವಿಸಿದೆ. ಅಂಕೋಲೆಯ ನಿವೃತ್ತ ಶಿಕ್ಷಕ ದಂಪತಿಗಳಾದ ಭವಾನಿ ಹಾಗೂ ಸುಕದ್ ನಾಯಕ ಹಿರೇಗುತ್ತಿಯವರ ಹೆಮ್ಮೆಯ ಪುತ್ರಿ ಕಾವ್ಯಶ್ರೀ, ಗೋಖಲೆ ಸೆಂಟನರಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಬಿ.ಎಸ್.ಇ. ಪದವಿಯನ್ನು ವಿಶ್ವವಿದ್ಯಾನಿಲಯಕ್ಕೆ ಏಳನೇ ಸ್ಥಾನ, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ಗಳಿಸಿದ್ದಾರೆ. ಇವರು ಸರಕಾರಿ ಶಾಲೆಯಲ್ಲಿ ಕಲಿತು ಈ ಸಾಧನೆ ಮಾಡಿದ್ದು, ಈಕೆಗೆ ಎಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ.

RELATED ARTICLES  ಶಿರಸಿ: ನಾನು ಎಲ್ಲಿಗೆ ಹೋದರು ಸ್ಥಳ ಶುದ್ಧೀಕರಣ ಮಾಡುತ್ತೀರಾ? ಪ್ರಕಾಶ್ ರೈ

ಇವರು ತಮ್ಮ ಪಿ.ಎಚ್.ಡಿ ಅಧ್ಯಯನವನ್ನು ಎನ್.ಐ.ಟಿ.ಕೆ ಪ್ರಾಧ್ಯಾಪಕರಾಗಿರುವ ಪ್ರೋ. ಎ. ವಾಸುದೇವ ಮತ್ತು ಡಾ. ಉದಯಕುಮಾರ ಡಿ. ರವರ ಮಾರ್ಗದರ್ಶನದಲ್ಲಿ ‘ನಾನ್ಯಂಗ ಟೆಕ್ನಾಲಜಿ ಯುನಿವರ್ಸಿಟಿ’ (ಎನ್.ಟಿ.ಯು.) ಸಿಂಗಾಪುರ, ನಾರ್ಥ್ ಕ್ಯಾರೊಲಿನಾ ಸ್ಟೇಟ್ ಯುನಿವರ್ಸಿಟಿ ಅಮೇರಿಕಾ ಮತ್ತು ದಿ ಯುನಿವರ್ಸಿಟಿ ಆಫ್ ನಾಂಟೆಸ್ ಫ್ರಾನ್ಸ್ ಸಹಯೋಗದೊಂದಿಗೆ ಪೂರೈಸಿರುತ್ತಾರೆ. ಇವರ ಸಂಶೋಧನೆಯು ಅಗಸ್ಟ್ 2021 ರಲ್ಲಿ ಐ.ಐ.ಟಿ ದೆಹಲಿ ಆಯೋಜಿಸಿದ ಅಂತರಾಷ್ಟ್ರೀಯ ಥಿನ್ ಫಿಲ್ಮ್ ಆಂಡ್ ನ್ಯಾನೊಟೆಕ್ನಾಲಜಿ ಸಮ್ಮೇಳನದಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ ಪಡೆದಿದೆ.

RELATED ARTICLES  ಜನತೆಯ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸದೇ ದುಷ್ಟ ರಾಜಕಾರಣ ಮಾಡುತ್ತಿದೆ: ಜಿ.ಪಂ‌ ಸದಸ್ಯೆ ಶ್ರೀಕಲಾ ಶಾಸ್ತ್ರಿ

ಇವರು ಐ.ಐ.ಎಸ್.ಸಿ.ಎಲ್.ಇ. ಸಂಶೋಧಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನ್ಯಾಶನಲ್ ಯುನಿವರ್ಸಿಟಿ ಸಿಂಗಾಪುರದಲ್ಲಿ ಇವರು ತಮ್ಮ ಸಂಶೋಧನೆಗೆ ಮಹೋನ್ನತ ಮಹಿಳಾ ಸಂಶೋಧಕಿ ಅವಾರ್ಡ್ ಪಡೆದಿದ್ದಾರೆ.