ಹೊನ್ನಾವರ : ಹವ್ಯಕ ಮಂಡಲ ಕುಮಟಾ, ಶ್ರೀ ರಘೋತ್ತಮ ಮಠ ಕಕ್ಕಾರು ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು, ಶಾಖೆ ಉತ್ತರ ಕನ್ನಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ. ಜಿ.ಎಲ್. ಹೆಗಡೆಯವರಿಗೆ “ಅಭಿನಂದನಾ ಕಾರ್ಯಕ್ರಮ” ದಿನಾಂಕ 9 ಫೆಬ್ರುವರಿ 2022 ಬುಧವಾರ ಸಾಯಂಕಾಲ 4:00 ಘಂಟೆಗೆ ಶ್ರೀ ರಘೋತ್ತಮ ಮಠ, ಕೆಕ್ಕಾರಿನ ಶ್ರೀ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ, ಶ್ರೀ ಭಾರತಿ ಸಭಾಭವನದಲ್ಲಿ ನಡೆಯಲಿದೆ.

ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಪ್ರೊ. ಎಸ್. ಶಂಭು ಭಟ್ಟ, ಕಡತೋಕ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.) ಇದರ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ, ಕೆರೆಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೊನ್ನಾವರ ಎಸ್. ಡಿ. ಎಮ್. ಕಾಲೇಜಿನ ಉಪನ್ಯಾಸಕ ಪ್ರೊ. ನಾಗರಾಜ ಹೆಗಡೆ ಶುಭಾಶಂಸನೆ ಗೈಯಲಿದ್ದಾರೆ.

RELATED ARTICLES  ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗಾಗಿ ಪರೀಕ್ಷೆ

ಶ್ರೀ ಆರ್. ಜಿ. ಹೆಗಡೆ (ಅಧ್ಯಕ್ಷರು ಹವ್ಯಕ ಮಂಡಲ, ಹೊನ್ನಾವರ) ಶ್ರೀ ಜಿ. ಎಸ್. ಹೆಗಡೆ (ಅಧ್ಯಕ್ಷರು ಹವ್ಯಕ ಮಂಡಲ, ಕುಮಟಾ) ಶ್ರೀ ಸುಬ್ರಾಯ ಭಟ್ಟ (ಅಧ್ಯಕ್ಷರು ಶ್ರೀ ರಘೋತ್ತಮ ಮಠ, ಕೆಕ್ಕಾರು) ಶ್ರೀ ಶಿವಾನಂದ ಹೆಗಡೆ, ಕಡತೋಕಾ (ನಿರ್ದೇಶಕರು, ಕೆ. ಡಿ. ಸಿ. ಸಿ. ಬ್ಯಾಂಕ್ ಲಿ., ಶಿರಸಿ), ಶ್ರೀ ಮಂಜುನಾಥ ಭಟ್ಟ, ಸುವರ್ಣಗದ್ದೆ (ಅಧ್ಯಕ್ಷರು, ವ್ಯವಸ್ಥಾ ಪರಿಷತ್ತು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ, ಆಶೋಕೆ ಗೋಕರ್ಣ), ಶ್ರೀ ಅರುಣ ಹೆಗಡೆ‌ (ನಿರ್ದೇಶಕರು ಅಖಿಲ ಹವ್ಯಕ ಮಹಾಸಭಾ ಉತ್ತರ ಕನ್ನಡ ಶಾಖೆ) ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

RELATED ARTICLES  ಗ್ರಾಮ ಒಕ್ಕಲು ಯುವ ಬಳಗದಿಂದ ಅಪಘಾತ ಪರಿಹಾರ ನಿಧಿಯ ವಿತರಣೆ

ಡಾ.ಜಿ ಎಲ್ ಹೆಗಡೆಯವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ವಿನಂತಿಸಿದ್ದಾರೆ.