ಬೆಂಗಳೂರು: ನಾಳೆಯಿಂದ 3 ದಿನ ಹೈಸ್ಕೂಲ್, ಪ.ಪೂರ್ವ, ಪದವಿ ಎಂಜಿನಿಯರ್ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು. ನಾಳೆಯಿಂದ 3 ದಿನ ಹೈ ಸ್ಕೂಲ್, ಪ.ಪೂರ್ವ, ಪದವಿ ಎಂಜಿನಿಯರ್ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಅವರು ಹೇಳಿದರು.
ಹಿಜಾಬ್ ವಿವಾದ ರಾಜ್ಯದಲ್ಲಿ ಹೆಚ್ಚಿದ್ದು, ಈ ವಿವಾದ ಹೈ ಸ್ಕೂಲ್, ಪ.ಪೂರ್ವ, ಪದವಿ ಎಂಜಿನಿಯರ್ ಕಾಲೇಜುಗಳಿಗೆ ಗಳಿಗೆ ವಿಸ್ತರಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇತರೆ ಕಡೆ ಈ ಪ್ರತಿಭಟನೆ ನಡೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಹೀಗಾಗಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಚಿವ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ಪದವಿ ಕಾಲೇಜು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಈ ನಡುವೆ ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್ಯದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಸದ್ಯ ಈ ವಿವಾದವು ನ್ಯಾಯಾಪೀಠದ ಮುಂದೆ ಇದ್ದು, ನ್ಯಾಯಾಲಯದ ತೀರ್ಪು ಕಾಯುವಂತೆ ಅವರು ಮನವಿ ಮಾಡಿದರು. ಇದೇ ವೇಳೇ ತಮ್ಮ ಸಚಿವ ಸಂಪುಟದ ಸಹೋದ್ಯೋಗಳಿಗೆ ನೀಡುತ್ತಿರುವ ಹೇಳಿಕೆಗೂ ಕೂಡ ಅವರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಗಲಾಟೆಯಾಗಿರುವ ಪ್ರದೇಶದಲ್ಲಿ ರಜೆ ನೀಡುವಂತೆ ಸೂಚನೆ ನೀಡಿರುವೆ. ಇಂದು ಸಂಜೆ ಬೆಂಗಳೂರಿಗೆ ತೆರಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಅಂತ ತಿಳಿಸಿದರು. ಇನ್ನೂ ಯಾರು ಕೂಡ ಪ್ರಚೋದನೆ ಮಾಡುವ ಕೆಲಸ ಮಾಡಬಾರದು, ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಹೈಕೋರ್ಟ್‌ನಿಂದ ಅಂತಿಮ ಆದೇಶ ಬರುವ ತನಕ ತಾಳ್ಮೆಯಿಂದ ಇರುವಂತೆ ಅವರು ಹೇಳಿದರು.
Source : Prajanadi.