ಹಳಿಯಾಳ : ಕೈ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಮೊಸಳೆ ದಾಳಿಗೆ ತುತ್ತಾಗಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪಟೇಲನಗರದ ಪಂಪ್‌ಹೌಸ್ ಹತ್ತಿರದಲ್ಲಿ ಆರ್ಷದ್ ಖಾನಿನ ಮೃತದೇಹ ಪತ್ತೆಯಾಗಿದೆ. ರಾಂಪ್ಪ್ ತಂಡದಲ್ಲಿದ್ದ ನುರಿತ ಮುಳುಗು ತಜ್ಞರು ಯುವಕನ ಮೃತ ಶರೀರವನ್ನು ಪತ್ತೆ ಹಚ್ಚಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ಇತ್ತ ಮೃತ ಶರೀರವನ್ನು ಮನೆಯ ಮುಂಭಾಗಕ್ಕೆ ತಂದು ಆನಂತರ ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂತರಾಷ್ರ್ಟೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ

ಯುವಕ ನಾಪತ್ತೆಯಾದ ದಿಂದ ಪ್ರಾರಂಭಗೊಂಡಿದ್ದ ಶೋಧ ಕಾರ್ಯಾಚರಣೆಯನ್ನು ಬೆಳಿಗ್ಗೆ ಮುಂದುವರಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಾದ ಬಳಿಕ ಮೃತ ಯುವಕನ ಬಂಧುಗಳು ಹಾಗೂ ನಗರದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮೃತ ಯುವಕನ ಅಣ್ಣನಿಗೆ ಅರಣ್ಯ ಇಲಾಖೆಯಲ್ಲಿ ನೌಕರಿ ಕೊಡಿಸುವಂತೆ ಹಟ ಹಿಡಿದರು. ಮತ್ತೆ ಇಂಥಹ ಘಟನೆಗಳು ನಡೆಯದಂತೆ ತಡೆಗೋಡೆ ಇಲ್ಲವೆ ಬೇಲಿ ನಿರ್ಮಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಬಸವರಾಜ್‌ ಅವರು ಮೃತ ಯುವಕನ ಕುಟುಂಬಸ್ಥರಿಗೆ ಇಲಾಖೆಯ ವತಿಯಿಂದ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಮೃತ ಯುವಕನ ಅಣ್ಣನನೌಕರಿಯ ಬಗ್ಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕಳುಹಿಸುವ ಭರವಸೆ ನೀಡಿದರು. ಡಿವೈಎಸ್ಪಿ ಗಣೇಶ್ ಕೆ.ಎಲ್. ಅವರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು. ಈ ವೇಳೆ ತಹಶೀಲ್ದಾರ್‌ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್. ಪವಾರ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಉತ್ತರ ಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ.ಸಯ್ಯದ ಝಮೀರುಲ್ಲಾ ಶರೀಫ್ ಅವರ ಸಂದರ್ಶನ

ಕಾರ್ಯಾಚರಣೆಯ ಸಂದರ್ಭದಲ್ಲಿ  ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್. ಘೋಟೇಕರ ಅವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿದರು.