ಮನೆಯ ಕಪಾಟಿನಲ್ಲಿದ್ದ ಬಂಗಾರದ ಸರ ಕಳ್ಳತನ

ಕುಮಟಾದ ಮನೆಯೊಂದರ ಕಪಾಟಿನಿಂದ ಸುಮಾರು 35 ಗ್ರಾಂ ತೂಕದ ಬಂಗಾರದ ಸರ ಕಳ್ಳತನ ಆಗಿರುವ ಬಗ್ಗೆ ತಾಲ್ಲೂಕಿನ ಬಾಡ ಗ್ರಾಮದ ಜೇಷ್ಠಾಪುರದ ಮಹಿಳೆಯೊಬ್ಬರು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಸ್ಥಳೀಯ ಸುದ್ದಿ ಪತ್ರಿಕೆ ವರದಿಮಾಡಿದೆ. ಜೇಷ್ಠಾಪುರದ ಜಯಲಕ್ಷ್ಮೀ ಹರೀಶ ನಾಯ್ಕ ದೂರು ನೀಡಿದ್ದು, ಒಂದು ವಾರದ ಹಿಂದೆ ಬಂಗಾರದ ಸರವನ್ನು ತನ್ನ ಅಣ್ಣನೇ ಕಳ್ಳತನ ಮಾಡಿರುವ ಸಂಶಯ ಕಾಡುತ್ತಿದೆ ಎಂದು ಜಯಲಕ್ಷ್ಮೀ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES  ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ

ಫೇ. ೧೨ ಕುಮಟ ಅತೀಕ್ರಮಣದಾರರ ಸಭೆ.

ಕುಮಟ: ಅರಣ್ಯ ಭೂಮಿ ಹೋರಾಟದ ೩೦ ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆಗೆ ಫೇ. ೧೭, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಕುಮಟ ತಾಲೂಕ ಅರಣ್ಯ ಅತೀಕ್ರಮಣದಾರರ ಸಭೆಯನ್ನು, ಫೇ. ೧೨, ಶನಿವಾರದಂದು, ಮಾಸ್ತಿಕಟ್ಟೆ ದೇವಸ್ಥಾನ, ಬಸ್‌ಸ್ಟಾಂಡ್ ಸರ್ಕಲ್, ಕುಮಟದಲ್ಲಿ ಸಂಘಟಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಅತೀಕ್ರಮಣದಾರರು ಸಭೆಗೆ ಆಗಮಿಸಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.

RELATED ARTICLES  ಸಂದೀಪ ಭಟ್ಟ ಹೊಸಾಕುಳಿ ಇವರಿಗೆ ಸಾಹಿತ್ಯ ಸೇವಾ ದುರಂಧರ ಬಿರುದು ಪ್ರದಾನ