ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ದೇಶ ವಿದೇಶದಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ  ತನಿಖಾ ದಳಕ್ಕೆ ದೂರು ದಾಖಲಾಗಿದೆ.
ಕುಮಾರ ಸ್ವಾಮಿ ಮತ್ತು ದೇವೇಗೌಡರ ಕುಟುಂಬಸ್ಥರು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಬುಧವಾರ ಐಟಿ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಐಟಿ ಇಲಾಖೆ ಎರು ಕುಟುಂಬಸ್ಥರು ದೇಶ ವಿದೇಶಗಳಲ್ಲಿ ಹೊಂದಿರುವ ಬೇನಾಮಿ ಆಸ್ತಿ ಬಗ್ಗೆ ವಿಚಾರಣೆ ನಡೆಸಿದೆ.
ಜಂತಕಲ್ ಮೈನಿಂಗ್ ಕೇಸ್ ಸಂಬಂಧ ಕಳೆದ ವಾರ ಕುಮಾರಸ್ವಾಮಿ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಎದುರು ಹಾಜರಾಗಿದ್ದರು.
ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣ ಸಂಬಂಧ ಮಾರ್ಚ್ 29 ರಂದು ಸುಪ್ರೀಂಕೋರ್ಟ್ ಮಾಜಿ ಸಿಎಂ ಗಳಾದ ಧರ್ಮ ಸಿಂಗ್, ಎಚ್ ,ಡಿ ಕುಮಾರ ಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ ಎಸ್ ಐಟಿ ಗೆ ಸೂಚಿಸಿತ್ತು. ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಕ್ಲೀನ್ ಚಿಟ್ ನೀಡಿದ ಅಪೆಕ್ಸ್ ಕೋರ್ಟ್ ಅವರನ್ನು ಪ್ರಕರಣದಿಂದ ರಿಲೀಫ್ ನೀಡಿತ್ತು.
RELATED ARTICLES  2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ