ಶಿರಸಿ: ತಾಲೂಕಿನ ಬಂಡಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡಗಿಗದ್ದೆ ನಿವಾಸಿಯೋರ್ವಳು ತನ್ನ ಮಕ್ಕಳ ದೌರ್ಬಲ್ಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾವಿಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ವರದಿಯಾಗಿದೆ. ಈಕೆಯ ಓರ್ವ ಮಗ ಕುಡಿತದ ಚಟ ಮೈಗೂಡಿಸಿಕೊಂಡಿದ್ದ ಹಾಗೂ ಇನ್ನೋರ್ವನಿಗೆ ಎರಡೂ ಮಕ್ಕಳು ಕಾಲುಗಳ ಸ್ವಾಧೀನ ಇಲ್ಲವಾಗಿದ್ದು ಈ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

RELATED ARTICLES  ಐದು ದಿನಗಳ ಕಾಲ ಮಳೆ ಸಂಭವ : ಇಲಾಖೆ ಮಾಹಿತಿ

ಗೋದಾವರಿ ನಾಗುಗೌಡ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಈಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹತ್ತಿರವಿರುವ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾಳೆ. ಮೃತರ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಅಂತರಾಷ್ಟ್ರೀಯ ಸಾಕ್ಷರ ದಿನ ಹೊನ್ನಾವರದಲ್ಲಿ :ಉಮೇಶ ಮುಂಡಳ್ಳಿ ಗಾಯನ