ಭಟ್ಕಳ : ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಿ, ತಂಗಿಯ ಮದುವೆ ನಿಶ್ಚಯವಾಗಿದ್ದ ಸಂದರ್ಭದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಅಣ್ಣನೇ ಆತ್ಮಹತ್ಯೆಗೆ ಶರಣಾಗಿದ್ದು ಮನೆ ಮಗನನ್ನು ಕಳೆದುಕೊಂಡ ಕುಟುಂಬ ದಿಕ್ಕು ತೋಚದಂತಾದ ಪರಿಸ್ಥಿತಿ ತಾಲೂಕಿನ ಕೊಳ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಾಲೂಕಿನ ಕೋಣಾರ ಗ್ರಾಮ ಪಂಚಾಯತಿಯ ಬೆಸೆ ನಿವಾಸಿ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

RELATED ARTICLES  ಹೊನ್ನಾವರದಲ್ಲಿ ನಾಳೆ "ರಾಮಪದ"

ವೃತ್ತಿಯಲ್ಲಿ ಕೃಷಿಕನಾಗಿದ್ದು ಮನೆ ನಿರ್ವಹಣೆಯನ್ನು ಈತನೇ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೆರಡು ದಿನದಲ್ಲಿ ತಂಗಿಯ ಮದುವೆ ನಿಶ್ಚಯವಾಗಿತ್ತು ಈ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನೆಯ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಖೆ ನಂತರದಲ್ಲಿ ತಿಳಿದುಬರಬೇಕಿದೆ

RELATED ARTICLES  ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗೆ ಸನ್ಮಾನಕ್ಕೆ ಅರ್ಜಿ ಆಹ್ವಾನ.