ಯಲ್ಲಾಪುರ: ಉತ್ತರ ಕನ್ನಡದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು ಪ್ರತಿದಿನ ಒಂದೊಂದು ತಾಲೂಕಿನಿಂದ ವರದಿಯಾಗುತ್ತಿದೆ. ಇದೀಗ ಮತ್ತೆ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವತಿಯೋರ್ವಳು ಮನೆಯಿಂದ ಎಲ್ಲಿಯೋ ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾದ ಘಟನೆ ತೇಲಂಗಾರ ಗ್ರಾಮ ಜನತಾಕಾಲೋನಿಯಲ್ಲಿ ನಡೆದಿದೆ ಎಂದು ಸ್ಥಳೀಯ ಸುದ್ದಿ ಪತ್ರಿಕೆ ವರದಿಮಾಡಿದೆ.

RELATED ARTICLES  ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ದಾಳಿಮಾಡಿದ ಪೊಲೀಸರು.

ಜನತಾಕಾಲನಿಯ ಸ್ವಾತಿ ಎಂಬ ಯುವತಿ ನಾಪತ್ತೆಯಾದವಳು. ಈಕೆ ಮನೆ ಕೆಲಸ ಮಾಡಿ ಕೊಂಡಿದ್ದವಳು ಮಂಗಳವಾರದಂದು 08-30 ರ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಎಲ್ಲಿಗೆ ತೆರಳಿದ್ದಾಳೆ ಹಾಗೂ ನಡೆದಿರುವ ಘಟನೆಗಳು ಏನು? ಎನ್ನುವುದರ ಬಗ್ಗೆ ಪೊಲೀಸ್ ತನಿಖೆಯಿಂದ ಪೂರ್ಣ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಕಾರವಾರ ಅಂಕೋಲಾ ನೆರೆ ಪೀಡಿತ ಪ್ರದೇಶಕ್ಕೆ ಸಂಸದ ಅನಂತಕುಮಾರ ಹೆಗಡೆ ಭೇಟಿ.