ಭಟ್ಕಳ: ಉತ್ತರ ಕನ್ನಡದಲ್ಲಿ ಆತ್ಮಹತ್ಯಾ ಸರಣಿ ಮುಂದುವರೆದಿದೆ. ಪ್ರತಿದಿನ ಒಂದಿಲ್ಲೊಂದು ತಾಲೂಕಿನಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ಇಂದು ಸಹ ಅಂತಹುದೇ ಪ್ರಕರಣವೊಂದು ವರದಿಯಾಗಿದೆ. ಕೋಣಾರ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಸೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ.

RELATED ARTICLES  ನನಗೆ ಇನ್ನೊಂದು ಅವಕಾಶ ನೀಡಿದರೆ, ನಾನು ನಿಮಗಾಗಿ ಐದು ವರ್ಷ ದುಡಿಯುತ್ತೇನೆ: ಜನತೆಯಲ್ಲಿ ವಿನಂತಿಮಾಡಿದ ಶಾಸಕಿ‌ ಶಾರದಾ ಶೆಟ್ಟಿ.

ಆತ್ಮಹತ್ಯೆ ಮಾಡಿಕೊಂಡವನನ್ನು ಮಂಜುನಾಥ ಸೋಮಯ್ಯ ಗೊಂಡ ಎಂದು ಗುರುತಿಸಲಾಗಿದೆ. ಈತ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟ ಹೊಂದಿದ್ದು ಮನೆಯ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿದೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  " ಶಿಕ್ಷಿತರು ಉದ್ಯಮಿಗಳಾಗಿ, ಸಮಾಜಕ್ಕೆ ನೆರವಾಗಬೇಕು"ರಾಮು ಹರಿ ಕಿಣಿ