ಭಟ್ಕಳ : ತಾಲ್ಲೂಕಿನ ಶಕ್ತಿ ಕ್ಷೇತ್ರಗಳಲ್ಲೊಂದಾದ ಕಿತ್ರೆಯ ಶ್ರೀಕ್ಷೇತ್ರ ದೇವಿಮನೆಯ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮಹಾರಥೋತ್ಸವ ಸಂಪನ್ನಗೊಂಡಿತು. ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ತಾಂತ್ರಿಕ ಗೋಕರ್ಣದ ಅಮೃತೇಶ್ವರ ಭಟ್ಟ ಇವರ ಆಚಾರ್ಯತ್ವದಲ್ಲಿ ಬೆಳಿಗ್ಗೆಯಿಂದಲೇ ಗಣೇಶ ಪೂಜೆ, ಪುಣ್ಯಾಹ, ದುರ್ಗಾಹವನ, ರುದ್ರಹವನ, ರಥ ಸಂಪ್ರೋಕ್ಷಣೆ, ಕಲಾಶಾಭಿಷೇಕ, ಪೂರ್ಣಾಹುತಿ, ಶ್ರೀ ದೇವರ ರಥಾರೋಹಣ, ತೀರ್ಥಪ್ರಸಾದ ವಿತರಣೆ ನಡೆಯಿತು. ರಾಘವೇಶ್ವರ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಲಂಬೋಧರ ಭಟ್ಟ, ಬಾಲಚಂದ್ರ ಭಟ್ಟ ಮತ್ತಿತರರ ಅರ್ಚಕರು ರಥೋತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು.

RELATED ARTICLES  ಬಾರ್ ನಲ್ಲಿ ಕಳ್ಳತನ : ನಗದು ಹಾಗೂ ಮಧ್ಯದ ಬಾಟಲಿ ಎಗರಿಸಿದ ಕಳ್ಳರು.

ವರ್ದಂತಿ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮವು ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಕಳೆದ ವರ್ಷ 50 ಲಕ್ಷ ರೂಪಾಯಿ ಅನುದಾದಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಕಿತ್ರೆ ದೇವಿಮನೆ ಯಾತ್ರಿ ನಿವಾಸ ಕಟ್ಟಡವು ಈ ಶುಭದಿನದಂದು ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ಅಮೃತ ಹಸ್ತದಲ್ಲಿ ಉದ್ಘಾಟನೆಗೊಂಡಿತು.

RELATED ARTICLES  ನಾಟಿ ವೈದ್ಯ ಹನುಮಂತ ಗೌಡರಿಗೆ ಸನ್ಮಾನ.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟಬೆಟ್ಕೂರು, ಮೊಕ್ತೆಸರ ಉಮೇಶ ಹೆಗಡೆ, ವೆ.ಮೂ ಸುಬ್ರಾಯ ಭಟ್ಟ, ಗುರು ಉಪಾಧ್ಯಾಯ, ಶ್ರೀಧರ ಭಟ್ಟ,ಸತೀಶ ಭಟ್ಟ, ಪ್ರಮುಖರಾದ ಎಂ ಎಂ ಹೆಬ್ಬಾರ, ಗಣೇಶ ಹೆಬ್ಬಾರ,ಅನಂತ ಹೆಬ್ಬಾರ, ಎಂ ವಿ ಭಟ್ಟ,ವಿನಾಯಕ ಭಟ್ಟ ಸೇರಿದಂತೆ ಹಲವು ಮುಖಂಡರು, ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ನಂತರದಲ್ಲಿ ಮಹಾಅನ್ನಸಂತರ್ಪಣೆ ನಡೆಯಿತು.