ಕಾರವಾರ: ಸಾಮಾಜಿಕ ಜಾಲತಾಣದ ಮೂಲಕ ವಿವಾಹಿತ ಮಹಿಳೆಯ ಸ್ನೇಹವನ್ನ ಸಂಪಾದಿಸಿಕೊಂಡು ಅದನ್ನೇ ದುರುಪಯೋಗ ಪಡಿಸಿಕೊಂಡು ವಿವಾಹಿತ ಮಹಿಳೆಗೆ ವಿಡಿಯೋ ಕಾಲ್ ಮಾಡುವ ಮೂಲಕ ಅವಳ ಅರೆನಗ್ನ ವಿಡಿಯೋ‌ ಸಂಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  ಗುಂಡಬಾಳ ನದಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಸದಾಶಿವಗಡ ಮೂಲಕ ವ್ಯಕ್ತಿಯೋರ್ವ ವಿದೇಶದಲ್ಲಿದ್ದು ಸಾಮಾಜಿಕ ಜಾಲತಾಣದ ಮೂಲಕ ವಿವಾಹಿತ ಮಹಿಳೆಯ ಸ್ನೇಹವನ್ನ ಮಾಡಿಕೊಂಡಿದ್ದ ಎಂಬ ಬಗ್ಗೆ ತಿಳಿದುಬಂದಿದೆ. ಸ್ನೇಹವನ್ನೇ ಬೆಳಸಿಕೊಂಡು ವಿಡಿಯೋ ಕರೆ ಮಾಡುವ ಮಟ್ಟಿಗೆ ಸ್ನೇಹ ಬೆಳೆದಿದ್ದು ವಿಡಿಯೋ ಕರೆ ಮಾಡುವಾಗ ಅರೆನಗ್ನ ವಿಡಿಯೋವನ್ನ ರೆಕಾರ್ಡ್ ಮಾಡಿಕೊಂಡಿದ್ದನು. ಕೆಲ ದಿನದ ಹಿಂದೆ ಮಹಿಳೆಯ ಸಂಭoದಿಯ ಫೇಸ್ ಬುಕ್ ಅಕೌಂಟ್ ನಲ್ಲಿ ಮಹಿಳೆಯ ಅರೆನಗ್ನ ವಿಡಿಯೋವನ್ನ ಟ್ಯಾಗ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.

RELATED ARTICLES  ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ನ್ಯಾಯ ಕೊಡಿಸುವಂತೆ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನ ನೀಡಿದ್ದಾಳೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.