ಕುಮಟಾ: ಉಚಿತ ಕೃತಕ ಕಾಲು ಜೋಡಣಾ ಶಿಬಿರ ನಗರದ ರೋಟರಿ ಸಭಾಂಗಣ ದ ನಾದಶ್ರೀ ಕಲಾ ಕೇಂದ್ರ ದಲ್ಲಿ ನಡೆಯಲಿದೆ ಎಂದು ಕುಮಟಾ ರೋಟರೀ ಕ್ಲಬ್ ಅಧ್ಯಕ್ಷೆ ಡಾ ನಮೃತಾ ಶಾನಭಾಗ ತಿಳಿಸಿದ್ದಾರೆ. ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಆಲ್ ಇಂಡಿಯಾ ಜೈನ್ ಯೂಥ್ ಪೆಡರೇಶನ್, ಮಹಾವೀರ್ ಲಿಂಬ್ ಸೆಂಟರ್ ಹುಬ್ಬಳ್ಳಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಮಟಾ ದ ಸಹಕಾರದೊಂದಿಗೆ ಫೆಬ್ರುವರಿ 18 ರಂದು ಬೆಳಿಗ್ಗೆ 10 ಗಂಟೆ ಇಂದ ಮಧ್ಯಾಹ್ನ 2 ಗಂಟೆ ತನಕ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.. ಕಾಲು ಕಳೆದುಕೊಂಡು ಕಷ್ಟ ಅನುಭವಿಸುತ್ತಿರುವ ಬಡ ಜನರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕಾರವಾರ ದಿಂದ ಭಟ್ಕಳ ದ ವರೆಗಿನ ಬಡ ಜನರಿಗೆ ಅವಶ್ಯಕತೆ ಇದ್ದಲ್ಲಿ ತಮ್ಮ ಹೆಸರನ್ನು ಕೂಡಲೇ ನೊಂದಾಯಿಸಿ ದಯವಿಟ್ಟು ಇದರ ಪ್ರಯೋಜನ ಪಡೆದುಕೊಳ್ಳಿ ಮತ್ತು ಈಗಾಗಲೇ ಕೃತಕ ಕಾಲು ಹೊಂದಿದ್ದವರು ಆ ಕಾಲು ಏನಾದರೂ ಸಮಸ್ಯೆ ಆಗಿದ್ದಲ್ಲಿ ಅದನ್ನು ಸರಿಪಡಿಸಿ ಕೊಡುವ ವ್ಯವಸ್ಥೆ ಕೂಡ ಇದೆ ಎಂದು ರೋಟರಿ ಕ್ಲಬ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಹೆಸರು ನೊಂದಾಯಿಸಲು ದೂರವಾಣಿ ಸಂಖ್ಯೆ – 94830 40614, 7204609646