ಕಾರವಾರ: ತಾಲೂಕಿನ ಸದಾಶಿವಗಡದ ದೋಬಿವಾಡದಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಸಾವನ್ನಪಪಿದ್ದು, ತೆಂಗಿನಕಾಯಿ ತರಲೆಂದು ಮನೆ ಸಮೀಪದ ತೆಂಗಿನಮರದ ಬಳಿ ತೆರಳಿದ ಮಹಿಳೆಯು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ‌. ಮಹಿಳೆ ಕಳೆದ ಹಲವು ವರ್ಷಗಳಿಂದ ಪಾರ್ಕಿನ್ಸನ್, ಶುಗರ್ ಹಾಗೂ ಬಿಪಿ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.

RELATED ARTICLES  ಹೊನ್ನಾವರ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ಕಾಂಗ್ರೇಸ್ ಮುಖಂಡರಿಂದ ಕಿಟ್ ವಿತರಣೆ.

ಟೆರೆಜಾ ಮಿನಿನೊ ರೋಡಗ್ರಿಸ್ ಮೃತ ಮಹಿಳೆಯಾಗಿದ್ದು, ಎಂದಿನಂತೆ ಕಾಯಿ ತರಲು ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಾರುಕಟ್ಟೆಗೆ ತೆರಳಿದ ಪತಿಯು ಮನೆಗೆ ಬಂದು ಹುಡುಕಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಹಲವು ಗಂಟೆಗಳ ಕಾಲ ಮೃತದೇಹವು ಬಿಸಿಲಿನಲ್ಲಿಯೇ ಇದ್ದ ಪರಿಣಾಮ ಚರ್ಮ ಸುಟ್ಟಿದ್ದು,  ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಅನಾರೋಗ್ಯದ ಹಿನ್ನೆಲೆ ಕುಡಿದ ಕಷಾಯವೇ ಸಾವಿಗೆ ಕಾರಣವಾಯ್ತಾ? ಶಿರಸಿಯಲ್ಲಿ ನಡೆದ ಘಟನೆ.