ಚೆನ್ನೈ: ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಈ ವೇಳೆ ಪಾಂಡ್ಯ ತಂಡದ ಗ್ಲೌಸ್ ಬದಲಿಗೆ ಮುಂಬೈ ಇಂಡಿಯನ್ಸ್ ಗ್ಲೌಸ್ ತೊಟ್ಟಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 87 ರನ್ ಗೆ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ತಂಡಕ್ಕೆ ಆಸರೆಯಾಗಿದ್ದು ಹಾರ್ದಿಕ್ ಪಾಂಡ್ಯ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಾಂಡ್ಯ 66 ಎಸತೆಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿ ಸೇರಿದಂತೆ 83 ರನ್ ಗಳನ್ನು ಸಿಡಿಸಿದ್ದರು. ಇದು ತಂಡ ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಅಲ್ಲದೆ ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 26 ರನ್ ಗಳಿಂದ ಜಯ ಗಳಿಸಿ ಟೂರ್ನಿಯಲ್ಲಿ ಪ್ರಥಮ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಆಡಿದ್ದ ಹಾರ್ದಿಕ್ ಪಾಂಡ್ಯ ಐಪಿಎಲ್ ಫ್ರಾಂಚೈಸಿ ತಂಡದ ಗ್ಲೌಸ್ ತೊಟ್ಟಿದ್ದು ಅಭಿಮಾನಿಗಳ ಹುಬ್ಬೇರಿಸಿದೆ. ಜತೆಗೆ ಟ್ವೀಟರ್ ನಲ್ಲಿ ಈ ಬಗ್ಗೆ ಅಸಮಾಧಾನಗಳೂ ವ್ಯಕ್ತವಾಗಿದೆ.
ಇನ್ನು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಮುಂಬೈ ಇಂಡಿಯನ್ಸ್ ಮುಖ್ಯವಾಗಿರುವುದರಿಂದ ತಂಡದ ಮೇಲಿನ ಪ್ರೀತಿಯಿಂದಾಗಿಯೇ ಪಾಂಡ್ಯ ಮುಂಬೈ ಇಂಡಿಯನ್ಸ್ ಗ್ಲೌಸ್ ಧರಿಸಿ ಬ್ಯಾಟಿಂಗ್ ಮಾಡುತ್ತಾರೆ ಎಂಬ ನಂಬಿಕೆಯೂ ಅವರಲ್ಲಿದೆ ಎನ್ನಲಾಗಿದೆ.
RELATED ARTICLES  ಇಂದಿನ ನಿಮ್ಮ ದಿನ ಹೇಗಿದೆ ಗೊತ್ತೇ? ಇಲ್ಲಿದೆ 11/05/2019ರ ರಾಶಿ ಫಲ