ಕುಮಟಾ : ಕೊರೋನಾ ಹಾವಳಿ ಕಡಿಮೆಯಾಗುತ್ತಿದ್ದಂತೆ ಉತ್ತರಕನ್ನಡಕ್ಕೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಅದಲ್ಲದೆ ಸದಾಕಾಲ ವಿದೇಶಿಗರನ್ನು ಸೆಳೆಯುತ್ತಿರುವ ಗೋಕರ್ಣದಲ್ಲಿ ವಸತಿಗೃಹವೊಂದರಲ್ಲಿ ವಿದೇಶದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ವಿದೇಶಿ ಪ್ರವಾಸಿಗನೊರ್ವ ಮುಖ್ಯ ಕಡತೀರದಲ್ಲಿನ ವಸತಿಗೃಹವೊಂದರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೃತ ವಿದೇಶಿ ಪ್ರವಾಸಿಗನನ್ನು ಈಸೋನಿಯಾ ದೇಶದ ಮಾರ್ಟಿನ್ ಎಂದು ಗುರುತಿಸಲಾಗಿದೆ. ಗೋವಾದಿಂದ ರವಿವಾರ ರಾತ್ರಿ ಇಬ್ಬರು ರಷ್ಯಾ ದೇಶದ ಯುವ ಪ್ರೇಮಿಗಳ ಜೊತೆ ಈತನು ಇಲ್ಲಿಗೆ ಬಂದಿದ್ದು, ಪ್ರತ್ಯೇಕ ವಸತಿ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದ ಎನ್ನಲಾಗಿದೆ. ಕೊಠಡಿಯಲ್ಲಿ ಇದ್ದ ಈತನನ್ನು ಕರೆದರು ಬರದಿದ್ದಾಗ ಸಂಶಯಗೊಂಡ ಇವನ ಜೊತೆಗಾರರು ವಸತಿಗೃಹದ ಮಾಲೀಕರಿಗೆ ಮಾಹಿತಿ ತಿಳಿಸಿ
ಬಾಗಿಲು ತೆಗೆದಾಗ ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ತಿಳಿದು ಬಂದಿದೆ.

RELATED ARTICLES  ಭಟ್ಕಳ ಕ.ಸಾ.ಪ. ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಿದ ಜಿಲ್ಲಾಧ್ಯಕ್ಷ ಕರ್ಕಿಕೋಡಿ

ಪಿ.ಐ.ವಸಂತ ಆಚಾರ, ಪಿ.ಎಸ್.ಐ. ರವೀಂದ್ರ ಬಿರಾದರ, ಪಿ.ಎಸ್.ಐ.ಸುಧಾ ಅಘನಾಶಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರ ತನಿಖೆ ನಂತರವೇ ತಿಳಿದು ಬರಬೇಕಿದೆ.

RELATED ARTICLES  ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ,- ನಾಗರಾಜ ನಾಯಕ ತೊರ್ಕೆ.