ಕುಮಟಾ: ಸಂತ ಸೇವಾಲಾಲ್ ಅವರ ವಿಚಾರಧಾರೆಗಳು ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ ಅವರ ಮಾರ್ಗಗಳನ್ನು ಅನುಸರಿಸಬೇಕು ಎಂದು ಪ್ರಭಾರೆ ತಹಶೀಲ್ದಾರ ಸತೀಶ ಗೌಡ ತಿಳಿಸಿದರು.
ಇಂದು ಕುಮಟಾ ತಾಲೂಕಡಾಳಿ ವತಿಯಿಂದ ತಹಶಿಲ್ದಾಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಂತ ಸೇವಾಲಾಲ್ ಅವರ 283 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಜಾರ ಸಮುದಾಯವನ್ನು ಉತ್ತಮ ಮಟ್ಟಕ್ಕೆ ತರುವಲ್ಲಿ ಸಂತ ಸೇವಾಲಾಲ್ ಅವರ ಪರಿಶ್ರಮ ಅಪಾರವಾದದ್ದು. ಅವರ ಅಮೂಲ್ಯ ಸಂದೇಶಗಳು ಮತ್ತು ಹಿತವಾಣಿಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯಬೇಕು ಎಂದರು.
ಬಂಜಾರ ಸಮುದಾಯದ ವೇಷ, ಭೂಷಣ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ಆದರೆ ಕೆಲವು ಕಡೆಗಳಲ್ಲಿ ಈ ಜನಾಂಗದ ವೇಷ, ಭೂಷಣ ಹಾಗೂ ಆಚರಣೆಗಳು ಕಡಿಮೆಯಾಗುತ್ತಿದ್ದು, ಇಂತಹ ವಿಶೇಷ ಸಂಸ್ಕಂತಿಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.
ಸೇವಾಲಾಲ್ ಅವರು ಸಮಾಜದ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಹಾಗೂ ಸಂಘಟನಾ ಚತುರತೆಯನ್ನು ಹೊಂದಿದ್ದರು ಜೊತೆಗೆ ಮಾನವತಾವಾಧಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರೆ ತಹಶೀಲ್ದಾರ ಸತೀಶ ಗೌಡ, ಎಸ್.ಕೆ.ನಾಯ್ಕ ಪ್ರಾಚಾರ್ಯರು ಭದ್ರಕಾಳಿ ಗೋಕರ್ಣ, ಎನ್.ಎಸ್ ಲಂಬಾಣಿ ಉಪನ್ಯಾಸಕರು, ಶಿವಾ ಪಿ ನಾಯ್ಕ ಬೊಬ್ರಲಿಂಗೇಶ್ವರ ವಿದ್ಯಾಲಯ, ಅಶೋಕ ವಿದ್ಯಾದಿರಾಜ ಕಾಲೇಜು ಕುಮಟಾ, ಶಿರಸ್ತೆದಾರ ಸಾವಂತ, ಪುಷ್ಪಾ ನಾಯ್ಕ, ಕಂದಾಯ ನಿರೀಕ್ಷಕರಾದ ಅಣ್ಣಯ್ಯ ಲಂಬಾಣಿ, ಟಿ.ಸ್.ಗಾಣಿಗೀರ, ಎನ್,ಡಿ.ಚಿತ್ರಿಗಿ, ಅನಿಲ, ಅಕ್ಷಯ್ಯ, ಲಕ್ಷ್ಮಣ ಹಾಗೂ ಕುಮಟಾ ತಾಲೂಕ ಬಂಜಾರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ದೀ ಸಂಘದ ಪದಾಧಿಕಾರಗಳಾದ ಮತ್ತಿತರರು ಉಪಸ್ಥಿತರಿದ್ದರು.