ಕುಮಟಾ : ತಾಲ್ಲೂಕಿನ ಜನತಾ ವಿದ್ಯಾಲಯ ಬಾಡದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮತ್ತು ಜನತಾ ವಿದ್ಯಾಲಯ ಬಾಡದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ .ಕ್ಷಯ ರೋಗದ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮವನ್ನು 2ಹಂತಗಳಲ್ಲಿ ಏರ್ಪಡಿಸಲಾಗಿದ್ದು ಎರಡನೇ ಹಂತದಲ್ಲಿ ಆಯ್ಕೆಯಾದ ಹತ್ತು ವಿದ್ಯಾರ್ಥಿಗಳು 5ತಂಡಗಳನ್ನಾಗಿ ವಿಂಗಡಿಸಿ 3ಸುತ್ತುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ..
ಕೀರ್ತಿ ತಿಮ್ಮಣ್ಣ ನಾಯ್ಕ ತಂಡ ಪ್ರಥಮ ಸ್ಥಾನ ಶ್ರಾವ್ಯಾ ನಾಯ್ಕ ತಂಡದವರು ದ್ವಿತೀಯ ಸ್ಥಾನ ಮತ್ತು ಜೇಷ್ಠ ಎನ್ ನಾಯ್ಕ ತೃತೀಯ ಸ್ಥಾನವನ್ನು ಪಡೆದು ನಗದು ಬಹುಮಾನವನ್ನು ಸ್ವೀಕರಿಸಿದರು ಮೊದಲನೇ ತಂಡಕ್ಕೆ 750 ಎರಡನೇ ತಂಡಕ್ಕೆ 500 ಮೂರನೇ ತಂಡಕ್ಕೆ 250 ನಗದು ಬಹುಮಾನ ನೀಡಲಾಗಿತ್ತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಶ್ರೀಮತಿ ಡಾ ಆಜ್ಞಾ ನಾಯಕ ಎಸ್ .ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆರ್ ಜಿ ನಾಯ್ಕ .ಮತ್ತು ಆರೋಗ್ಯ ನಿರೀಕ್ಷ ಣಾ ಅಧಿಕಾರಿ ದಿನೇಶ್ ನಾಯ್ಕ್ ಮತ್ತು ಸೀನಿಯರ್ ಟ್ರೀಟ್ಮೆಂಟ್ ಸುಪ್ರವೈಸರ್ .ರವೀಂದ್ರ ನಾಯ್ಕ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕರಾದ ಶ್ರೀಮತಿ ವೀಣಾ ಮಾಳಿಗೆ ರ ವಹಿಸಿದ್ದರು ಶ್ರೀಮತಿ ತನುಜಾ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು ಐ ವಿ ಭಟ್ಟ ಕಾರ್ಯಕ್ರಮವನ್ನು ನಿರ್ವಹಿಸಿದರು ಸತೀಶ್ ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿದರು ಕೊನೆಯಲ್ಲಿ ವಿಜ್ಞಾನ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿದರು.