ಕಾರವಾರ: ಉತ್ತರಕನ್ನಡದಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರು ಸಮುದ್ರದತ್ತ ಮುಖ ಮಾಡುತ್ತಿದ್ದು, ಅದರಿಂದ ಉಂಟಾಗುವ ಸಮಸ್ಯೆಯ ಬಗ್ಗೆಯೂ ಲಕ್ಷಿಸದೆ ನಿಯಮಗಳನ್ನು ಮೀರುತ್ತಿರುವುದು ಬೇಸರದ ಸಂಗತಿಯಾಗಿದೆ. ತಾಲೂಕಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಈಜಲು ತೆರಳಿದ ವೇಳೆ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನೋರ್ವನನ್ನ ವೇವ್ ಅಡ್ರೆಂಚರ್ ವಾಟರ್ ಸ್ಪೋರ್ಟ್ಸ್ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ.

RELATED ARTICLES  ಆನಂದಾಶ್ರಮ ಪದವಿ ಕಾಲೇಜಿನ ಉಪನ್ಯಾಸಕರಿಗೆ ವಿವಿಧ ಸ್ಪರ್ಧೆ-ಬಹುಮಾನ ವಿತರಣೆ.

ದಾವಣಗೆರೆ ಮೂಲದ ನಿತೀನ್ ರಕ್ಷಣೆಗೊಳಗಾದ ಎನ್ನುವ ಪ್ರವಾಸಿಗ. ಈತ ಕಡಲ ತೀರದಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಈಜುತ್ತಾ ಮುಂದೆ ಸಾಗಿ ಅಪಾಯಕ್ಕೆ ಸಿಲುಕಿದ್ದ. ತಕ್ಷಣ ಸ್ಥಳದಲ್ಲಿ ಗಮನಿಸಿದ ವೇವ್ ಅಡ್ರೆಂಚರ್ಸ್ ಸ್ಪೋರ್ಟ್ಸ್ ಸಿಬ್ಬಂದಿಗಳು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳು ಸ್ಥಳಕ್ಕೆ ಬೋಟ್‌ನಲ್ಲಿ ತೆರಳಿ ಪ್ರವಾಸಿಗನನ್ನ ರಕ್ಷಣೆ ಮಾಡಿದ್ದಾರೆ.

RELATED ARTICLES  ಭೀಕರ ರಸ್ತೆ ಅಪಘಾತ : ಭಟ್ಕಳ ಮೂಲದ ಐವರ ದುರ್ಮರಣ.. !