ಕಾರವಾರ : ಹೈಕೋರ್ಟ್ ನ ಮಧ್ಯಂತರ ತೀರ್ಪಿನ ನಂತರ ಇಂದಿನಿಂದ ಕಾಲೇಜುಗಳು ಪ್ರಾರಂಭವಾಗಿದೆ. ಆದರೆ ಉತ್ತರಕನ್ನಡದಲ್ಲಿ‌ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ಮತ್ತೆ ಮೇಲಕ್ಕೆ‌ ಎದ್ದಿದೆ. ಶಿರಸಿಯ ಎಂ.ಇ.ಎಸ್. ಕಾಲೇಜಿನಲ್ಲೂ ಸಹ 15 ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಅವರನ್ನು ಕಾಲೇಜಿನಿಂದ ಹೊರಕ್ಕೆ ಕಳುಹಿಸಿದರೂ ಕಾಲೇಜಿನ ಮುಂಭಾಗದಲ್ಲಿ ನಿಂತು ಹಿಜಾಬ್ ಹಾಕುವುದಾಗಿ ತಿಳಿಸಿದ್ದಾರೆ. ಇನ್ನು ಮೂರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜಿಗೆ ಪ್ರವೇಶಿಸಿದರು. ಟಿಪ್ಪು ನಗರದ ಸರ್ಕಾರಿ ಡಿಗ್ರಿ ಕಾಲೇಜಿನ 10 ವಿದ್ಯಾರ್ಥಿಗಳು,ಪ್ರೋಗ್ರೆಸಿವ್ ಕಾಲೇಜಿನ ಮೂರು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ತೆರಳಿದ್ದಾರೆ.

RELATED ARTICLES  ಯಕ್ಷಗಾನದ ಕೊಡುಗೆ ಅಪಾರ; ಭಾಗವತ ಅನಂತ ದಂತಳಿಗೆ

ಕಾರವಾರದ ದಿವೇಕರ್ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದರು. ಮಾಲಾದೇವಿ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಜನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದರು. ಕಾಲೇಜಿನ ಉಪನ್ಯಾಸಕರು ಕೋರ್ಟ ನ ಆದೇಶವನ್ನು ತಿಳಿಸಿ ಬುರ್ಕಾ ಹಾಗೂ ಹಿಜಾಬ್ ತಡಗೆದು ಪ್ರವೇಶಿಸುವಂತೆ ತಿಳಿಸಿದ್ದರು.ಆದರೇ ಕೆಲವರು ಇದಕ್ಕೆ ಒಪ್ಪದಿದ್ದಾಗ ಕಾಲೇಜು ಪ್ರವೇಶ ನಿರಾಕರಿಸಲಾಯಿತು. ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ತೆಗೆದುಕೊಳ್ಳುವಂತೆ ಸೂಚಿಸಿ ಮರಳಿ ಕಳುಹಿಸಲಾಯಿತು.

RELATED ARTICLES  ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದ ಗುರುವಂದನಾ ಸಮಾರಂಭ.

ಇನ್ನು ದಿವೇಕರ್ ಕಾಲೇಜಿನಲ್ಲಿ ಎಂಟು ಜನ ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಕಾಲೇಜು ಆಡಳಿತ ಅವರಿಗೆ ಮೊದಲು ಪ್ರವೇಶ ನೀಡಿದ್ದರಾದರೂ ನಂತರ ಅವರನ್ನು ಕಾಲೇಜಿನಿಂದ ತೆರಳುವಂತೆ ಸೂಚಿಸಲಾಯಿತು.