ಕುಮಟಾ: ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು, ಆದರೆ ಮದುವೆ ಮಂಟಪದ ಸನಿಹದಲ್ಲಿ ಅಪಘಾತವೊಂದು ಸಂಭವಿಸಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಮಾನೀರ ಸಮೀಪವಿರುವ ಗ್ರಾಮ ಒಕ್ಕಲಿಗ ಸಭಾಭವನದ ಸನಿಹ ನಡೆದಿದೆ. ಮದುವೆಗೆಂದು ತೆರಳುತ್ತಿದ್ದ ಮದುವೆ ಟೆಂಪೋ ಪಲ್ಟಿಯಾಗಿ ಮಕ್ಕಳು ಮಹಿಳೆಯವರು ಸೇರಿ ಆ ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಪ್ರತೀಕ್ಷಾ ಹಾಗೂ ದರ್ಶನ ಎಂಬುವವರ ವಿವಾಹ ಇಂದು ಗ್ರಾಮ ಒಕ್ಕಲಿಗ ಸಭಾಭವನದಲ್ಲಿ ನಡೆಯುತ್ತಿತ್ತು, ಈ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ.

RELATED ARTICLES  ರಾತ್ರಿ ವೇಳೆ ಅಪರಿಚಿತ ವ್ಯಕ್ತಿ ಓಡಾಟ : ಭಯದಲ್ಲಿ ಜನತೆ

ರಾಷ್ಟ್ರೀಯ ಹೆದ್ದಾರಿಯಿಂದ ಸಭಾಭವನಕ್ಕೆ ತೆರಳುತ್ತಿದ್ದ ವೇಳೆ ಏರಿನಲ್ಲಿ ಹೋಗುತ್ತಿರುವಾಗ ಹಿಮ್ಮುಖದಲ್ಲಿ ಬಂದು ಟೆಂಪೋ ಪಲ್ಟಿಯಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

RELATED ARTICLES  ಪ್ರಾಣಕ್ಕೇ ಕುತ್ತು ತರುವ ನೋವಿನ ಮಾತ್ರೆಗಳನ್ನು ಬ್ಯಾನ್ ಮಾಡಿದ ಕೇಂದ್ರ: ಅದರಲ್ಲಿ ಸೇರಿತ್ತು "ಸಾರಿಡಾನ್"