ಶಿರಸಿ: ಶಿರಸಿಯಲ್ಲಿ ಇಂದೂ ಕೂಡಾ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಘೋಷಣೆ ಕೂಗುತ್ತಾ ಆಗಮಿಸಿದ ಘಟನೆ ಎಂ ಎಂ ಕಲಾ ಮತ್ತು ವಿಜ್ಞಾನ ವಿದ್ಯಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಈ ಮೂಲಕ  ಉತ್ತರಕನ್ನಡದಲ್ಲೂ ಹಿಜಾಬ್ ವಿವಾದ ಪ್ರಖರತೆ ಪಡೆದುಕೊಳ್ಳುತ್ತಿದೆ.

ಇಂದು ಸಹ 25 ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಆಗಮಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರು ತರಗತಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದ್ದು, ಪ್ರಾಚಾರ್ಯರು ಹೈ ಕೋರ್ಟ್ ಆದೇಶದ ಪ್ರಕಾರ ಕಾಲೇಜು ನಿಗದಿಪಡಿಸಿದ ಸಮವಸ್ತ್ರದಲ್ಲಿ ಮಾತ್ರ ತರಗತಿಗೆ ಹಾಜರಾಗಬಹುದು ಎಂದು ತಿಳಿಸಿದರು.

RELATED ARTICLES  ಹಾಲಕ್ಕಿ ಸಮಾಜದವರು ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿ ಹೊಂದಬೇಕು- ನಾಗರಾಜ ನಾಯಕ ತೊರ್ಕೆ

ಈ ವೇಳೆ ಮಧ್ಯಪ್ರವೇಶಿದ ಶಿರಸಿ ಡಿಎಸ್‌ಪಿ ರವಿ ಡಿ ನಾಯ್ಕ ಅವರು, ಹೈ ಕೋರ್ಟ್ ಸಮವಸ್ತ್ರ ನೀತಿ ಪಾಲಿಸುವಂತೆ ಸ್ಪಷ್ಟವಾಗಿ ಆದೇಶಿಸಿದೆ ಎಂದು ಆದೇಶದ ಪ್ರತಿ ತೋರಿಸಿದರು. ಈ ವೇಳೆ ಆಗಮಿಸಿದ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಹೈ ಕೋರ್ಟ್ ಆದೇಶದ ಪ್ರತಿಯನ್ನು ಓದಿ ವಿದ್ಯಾರ್ಥಿನಿಯರಿಗೆ ತಿಳಿಹೇಳಿದರು. ಆದರೂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆರಳಲು ನಿರಾಕರಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರೊಂದಿಗೆ ಮಾತಿನ ಚಕಮಕಿ ಕೂಡಾ ನಡೆಯಿತು ಎನ್ನಲಾಗಿದೆ. ನಂತರದಲ್ಲಿ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಯಿತು.

RELATED ARTICLES  ನಿಮ್ಮೊಳಗಿನ ಶಕ್ತಿ ನೀವು ನಂಬಿ : ಸರಸ್ವತಿ ಪಿ.ಯು ಕಾಲೇಜಿನಲ್ಲಿ ಐಐಟಿ ದೆಹಲಿ ಪ್ರಧ್ಯಾಪಕ ಕಿರಣ ಸೇಠ್ ರಿಂದ ಮಕ್ಕಳಿಗೆ ಕಿವಿಮಾತು.