ಶಿರಸಿ: ಉತ್ತರಕನ್ನಡದಲ್ಲಿಯೂ ಹಿಜಾಬ್ ವಿವಾದ ತಾರಕಕ್ಕೆ ಏರುವ ಮುನ್ಸೂಚನೆ ಕಾಣುತ್ತಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಟೊಂಕ ಕಟ್ಟಿ ನಿಂತಿದೆ. ಈ ನಿಟ್ಟಿನಲ್ಲಿ ಆಡಳಿತದವರು ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಇದಕ್ಕೆ ಮೊದಲ ಹೆಜ್ಜೆ ಎಂಬಂತೆ  ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್‌ ಎಂ.ಆರ್.ಕುಲಕರ್ಣಿರವರು ಆದೇಶ ಹೊರಡಿಸಿದ್ದಾರೆ.

RELATED ARTICLES  ‘ವಿಶ್ವ ವಿಕಲಚೇತನರ ದಿನಾಚರಣೆ’ ಸ್ಪರ್ಧೆಯಲ್ಲಿ ವಿಘ್ನೇಶ್ ನಾಯ್ಕ ಪ್ರಥಮ

ಮುಂದಿನ ಆದೇಶ ಜಾರಿಯಾಗುವವರೆಗೆ ಪದವಿ, ಪದವಿಪೂರ್ವ ಕಾಲೇಜುಗಳು ಮತ್ತು ಪ್ರೌಢಶಾಲೆಗಳ ಸುತ್ತಲಿನ 200 ಮೀ. ವ್ಯಾಪ್ತಿಯೊಳಗೆ ಯಾವುದೇ ಘೋಷಣೆ ಕೂಗಲು, ಗುಂಪುಗಾರಿಕೆ ನಡೆಸಲು ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಚಟುವಟಿಕೆ ನಡೆಸಬಾರದು ಎಂದು ಆದೇಶಿಸಲಾಗಿದ್ದು, ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವುದು ಸೂಕ್ತ ಎನಿಸಿದೆ ಎಂದು ತಾಲೂಕಾಡಳಿತ ಅಭಿಪ್ರಾಯಪಟ್ಟಿದೆ.

RELATED ARTICLES  ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ : ಹರ ಸಾಹಸ ಪಟ್ಟು ಮಹಿಳೆಯನ್ನು ಬಾವಿಯಿಂದ ಹೊರತೆಗೆದು ಪ್ರಾಣ ರಕ್ಷಣೆ.

ಶಿರಸಿಯಲ್ಲಿ ನಿನ್ನೆ ದಿನ ಹಿಜಾಬ್ ಸಂಘರ್ಷ ತಾರಕ್ಕೆ ಏರಿತ್ತು‌ . ಇದರ ಜೊತೆಗೆ ಕೆಲವು ಸಂಘಟನೆಗಳು ಈ ವಿಷಯವನ್ನು ದೊಡ್ಡದಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿವೆ ಎನ್ನಲಾಗಿದ್ದು,
ಅದೇ ಕಾರಣಕ್ಕೆ ಶಸ್ತ್ರಾಸ್ತ್ರ ಕೊಂಡೊಯ್ಯಬಾರದು. ಪಟಾಕಿ ಸಿಡಿಸಬಾರದು. ವ್ಯಕ್ತಿಗಳ ಅಥವಾ ಪ್ರತಿಕೃತಿಗಳ ಪ್ರದರ್ಶನವನ್ನೂ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.