ಭಟ್ಕಳ: ತಾಲೂಕಿನ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೋರ್ವರ ಹೊಟ್ಟೆಯಲ್ಲಿದ್ದ ಸುಮಾರು 5 ಕೆ.ಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರ ತೆಗೆದಿದ್ದು, ಮಹಿಳೆಯನ್ನು ಪ್ರಾಣಾಪಾಯದಿಂದ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ತೆರ್ನಮಕ್ಕಿ ನಿವಾಸಿ, 50 ವರ್ಷದ ಮಹಿಳೆಯೋರ್ವರು ಕಳೆದ 3 ದಿನಗಳ ಹಿಂದೆ ತೀವ್ರ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ- ಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

RELATED ARTICLES  ಜಯಂತ ಕಾಯ್ಕಿಣಿಯವರಿಗೆ ಒಲಿದ ‘ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’

ಅವರನ್ನು ಸ್ತ್ರೀರೋಗ ತಜ್ಞರಾದ ಡಾ.ಬಾಲಚಂದ್ರ ಮೇಸ್ತ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದ ಗಡ್ಡೆ ಇರುವುದು ತಿಳಿದು ಬಂದಿದೆ. ನಂತರ ಈ ಬಗ್ಗೆ ಮಹಿಳೆಯ ಮನೆಯವರಿಗೆ ಮಾಹಿತಿ ನೀಡಿ, ಅನುಮತಿಯ ಮೇರೆಗೆ ಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿರುವ 5 ಕೆಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಕುಮಟಾದಲ್ಲಿ ಮತ್ತೊಮ್ಮೆ "ದಿಗ್ವಿಜಯ ರಥಯಾತ್ರೆ" : ವಿವೇಕಾನಂದರ ಸ್ಮರಣೆಯ ಜೊತೆಗೆ ಸೋದರಿ ನಿವೇದಿತಾಳ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದ ಕಾರ್ಯಕ್ರಮ.

ಚಿಕಿತ್ಸೆಯ ಬಳಿಕ ಮಹಿಳೆ ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಡಾ.ಹೇಮಾವತಿ ಹೆಬ್ಬೆ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ಮಾಡಲು ಸಹಕರಿಸಿದ್ದಾರೆ.