ಸಿದ್ದಾಪುರ:ಮನೆಯ ಅಂಗಳದಲ್ಲಿ ಒಣಗಿಸಿ ಇಟ್ಟಿದ್ದ ಅಡಿಕೆ ಚೀಲವನ್ನು ಯಾರೋ ಕಳವು ಮಾಡಿದ್ದು,10,000 ರೂ. ಮೌಲ್ಯದ ಅಡಿಕೆ ಕಳ್ಳತನವಾಗಿರುವ ಘಟನೆ ತಾಲೂಕಿನ ಅಳಗೋಡ್ ನಲ್ಲಿ ನಡೆದಿದೆ. ತಮ್ಮ ತೋಟದಲ್ಲಿ ಬೆಳೆದ ಅಡಿಕೆಯನ್ನು ಒಣಗಿಸಿ ಹಸಿರು ಬಣ್ಣದ 20 ಚೀಲಗಳಲ್ಲಿ ತುಂಬಿಟ್ಟಿದ್ದು, ಅದರಲ್ಲಿಯ 40 ಕೆಜಿಯ ಸಿಪ್ಪೆ ಗೋಟಿನ ಅಡಿಕೆಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಹಚ್ಚಿ ಕೊಡುವಂತೆ ಶಿವಾನಂದ್ ನಾಯ್ಕ್ ಅಳಗೋಡು ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಕೊಳೆತ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ : ಕೆಲಕಾಲ ಗೊಂದಲ