ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರ ನಿಧನದ ನಂತರ ತೀವ್ರ ಆಘಾತಕ್ಕೊಳಗಾಗಿದ್ದ ಅಶ್ವಿನಿ ಅವರ ತಂದೆ ರೇವನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರೇವನಾಥ್ (78) ಅವರು ಪುನೀತ್ ಅವರ ನಿಧನ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇಂದು  ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಹೃದರ್ಯಾಘಾತದಿಂದ ಸಾವನ್ನಪಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

78 ವರ್ಷದ ರೇವನಾಥ್  ಅವರು  ಅಪ್ಪು ಅಗಲಿಕೆ ಬಳಿಕ  ಅಶ್ವಿನಿ ತಂದೆ, ತಾಯಿ, ಮಗಳ ಜೊತೆ ಸದಾಶಿವನಗರದ ನಿವಾಸದಲ್ಲಿದಲ್ಲೇ ವಾಸವಿದ್ದರು. ಅಪ್ಪು ಅಗಲಿಕೆ ಬಳಿಕ ಮಗಳಿಗೆ ಒಂಟಿತನ ಕಾಡಬಾರದೆಂದು ಜೊತೆಯಲ್ಲೇ ಇದ್ದರು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರಿಗೆ ದಿಢೀರ್ ಅಂತಾ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೆ ಅಶ್ವಿನಿಯವರ ತಂದೆ ಇಹಲೋಕ ತ್ಯಜಿಸಿದ್ದಾರೆ.

RELATED ARTICLES  ಉಪನ್ಯಾಸಕರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಚಿಂತನೆ.!

ಚಿಕ್ಕಮಗಳೂರು ಮೂಲದ ಅಶ್ವಿನಿ ತಂದೆ, ಹಲವು ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದರು. ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.

Source : Public TV