ಶಿರಸಿ : ನಮ್ಮ ದೇಶದ ಸೈನ್ಯ ವ್ಯವಸ್ಥೆಯಲ್ಲಿ ಮಂಚೂಣಿಯಲ್ಲಿರುವ ನೌಕಾಸೇನೆಗೆ ಶಿರಸಿಯ ಗಾಂಧಿನಗರದ ನಿವಾಸಿ ಮುಂಡಗೋಡ ತಾಲೂಕಿನ ಧರ್ಮಾ ಕಾಲನಿಯ ಸ. ಹಿ. ಪ್ರಾ. ಶಾಲೆಯ ಶಿಕ್ಷಕ ಶ್ರೀ ಕಾಶಿನಾಥ ನಾಯ್ಕ ಮತ್ತು ವಿಲಾಸಿನಿ ನಾಯ್ಕ ದಂಪತಿಗಳ ಮಗನಾದ ನಮನ ನಾಯ್ಕ ಆಯ್ಕೆಯಾಗುವ ಮೂಲಕ ಹೊಸ‌ ದಾಖಲೆ ಬರೆದಿದ್ದಾನೆ.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಿವಿಎಸ್‌ಕೆ ವಿದ್ಯಾರ್ಥಿಗಳು

ಕೇವಲ 18ರ ಹರಯದಲ್ಲಿ ನೌಕಾಸೇನೆಯ ಸೀನಿಯರ್ ಸೆಕೆಂಡರಿ ರಿಕ್ರೂಟ್ ಹುದ್ದೆಗೆ ನೇಮಕಗೊಳ್ಳುವ ಮೂಲಕ ಈತ ಊರಿಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.  ಸದ್ಯ ಓಡಿಸ್ಸಾದ ಐ.ಎನ್.ಎಸ್. ಚೀಲಕಾದಲ್ಲಿ ತರಬೇತಿ ಪಡೆಯುತ್ತಿರುವ ನಮನ ನಾಯ್ಕ ಮುಂದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳುವ ಇಚ್ಛೆ ಹೊಂದಿದ್ದು, ಸೇವೆಯಲ್ಲಿರುವಾಗಲೇ ಬಿ.ಟೆಕ್ ಪದವಿ ಪಡೆದು ತನ್ಮೂಲಕ ಕೆ. ಏ. ಎಸ್. ಮಾಡಬೇಕೆಂಬ ಪ್ರಬಲ ಉತ್ಸಾಹದಲ್ಲಿದ್ದಾನೆ.

RELATED ARTICLES  ಶಿರಸಿಯ ಖ್ಯಾತ ವೈದ್ಯ ಡಾ. ಶಿವಸ್ವಾಮಿ ಇನ್ನಿಲ್ಲ

ನಮ್ಮ ನಾಡಿನ ಹೆಮ್ಮೆಯ ಪುತ್ರ ನಮನನ ಜೀವನದಲ್ಲಿ ಸದಾ ಯಶಸ್ಸು ದೊರೆಯಲೆಂದು ಮನಃಪೂರ್ವಕವಾಗಿ ಹಾರೈಸುತ್ತೇವೆ.