ಭಟ್ಕಳ : ಇಬ್ಬರ ನಡುವೆ ಜಗಳ ತಪ್ಪಿಸುವ ಉದ್ದೇಶದಿಂದ ಜಗಳ ಮಾಡಿಕೊಳ್ಳದಂತೆ ಬುದ್ದಿವಾದ ಹೇಳಿದಕ್ಕೆ ವ್ಯಕ್ತಿಯೋರ್ವನ ಮೇಲೆ ಸೋಡಾ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ , ಮೋಹನ , ಸುನೀಲ ಎನ್ನುವವರು ಸರ್ಪನಕಟ್ಟಾ ವೈಷ್ಣವಿ ಹೊಟೇಲ್ ಹೊರಗಡೆ ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ವ್ಯಕ್ತಿಯೋರ್ವರು, ನೀವು ಇಲ್ಲಿ ಯಾಕೆ ಜಗಳ ಮಾಡುತ್ತಿದ್ದೀರಿ? ಪಕ್ಕಕ್ಕೆ ಹೋಗಿ ಜಗಳ ಮಾಡಿ ಎಂದು ಹೇಳಿದ್ದಕ್ಕೆ ಸಿಟ್ಟಾದ ಮಹೇಶ ಎನ್ನುವವರು, ನೀನು ಯಾರು ನನಗೆ ಹೇಳುವವನು ಎಂದು ಹೇಳಿ ಅಲ್ಲಿಯೇ ಹೊಟೇಲ್ ಪಕ್ಕದಲ್ಲಿದ್ದ ಖಾಲಿ ಸೋಡಾ ಗಾಜಿನ ಬಾಟಲಿಯಿಂದ ವ್ಯಕ್ತಿಯ ಎಡಕಿವಿಯ ಭಾಗಕ್ಕೆ ಹೊಡೆದು ಗಾಯ ಮಾಡಿದ್ದಾನೆ. ಅಲ್ಲದೇ ಇನ್ನಿತರರು ಕೂಡ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವುದಾಗಿ ಮೂವರ ಮೇಲೂ ಪ್ರಕರಣ ದಾಖಲಾಗಿದೆ.

RELATED ARTICLES  ಏಕಾದಶಿಯ ಪರ್ವದಿನವಾದ ನಾಳೆ ರಾಮಪದ ~ ಸಹಜ ಸತ್ಸಂಗ